- Advertisement -
Dharwad News: ಧಾರವಾಡ: ಚಿಕಿತ್ಸೆ ಪಡೆಯಲೆಂದೇ ಆಸ್ಪತ್ರೆಗೆ ಬಂದಾಗ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಸಪ್ತಾಪುರದಲ್ಲಿ ಈ ಘಟನೆ ನಡೆದಿದ್ದು, ರಾಜೇಂದ್ರ ಬೋಸ್ (50) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ರಾಜೇಂದ್ರ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುತ್ತಿದ್ದಾಗಲೇ ಎದೆ ನೋವು ಕಾಣಿಸಿಕ“ಂಡಿದೆ. ಹೀಗಾಗಿ ಚಿಕಿತ್ಸೆ ಪಡೆಯಲೆಂದೇ ಆಸ್ಪತ್ರೆಗೆ ಹೋಗಿದ್ದ. ಆದರೆ ರವಿವಾರವಾಗಿದ್ದ ಕಾರಣ ಆಸ್ಪತ್ರೆ ಬಂದ್ ಆಗಿತ್ತು. ಆದರೆ ಬೇರೆ ಆಸ್ಪತ್ರೆಗೆ ಹೋಗುವ ಮುನ್ನವೇ ಅದೇ ಆಸ್ಪತ್ರೆ ಎದುರೇ ರಾಜೇಂದ್ರ ಕುಸಿದು ಬಿದ್ದು, ಪ್ರಾಣ ಬಿಟ್ಟಿದ್ದಾನೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement -