Wednesday, March 12, 2025

Latest Posts

Dharwad News: ಕೊನೆ ಕ್ಷಣದಲ್ಲಿ ರೈತನ ಕೈತಪ್ಪಿದ ಕಷ್ಟಪಟ್ಟು ಬೆಳೆದ ಬೆಳೆ, ಬೆಂಕಿ ಆಟಕ್ಕೆ ರೈತ ಕಂಗಾಲು

- Advertisement -

Dharwad News: ಕಡಲೆ ಹಾಗೂ ಹುರುಳಿ ಬೆಳೆ ರಾಶಿ ಮಾಡುವ ಉದ್ದೇಶದಿಂದ ಗ್ರಾಮದ ಹೊರವಲಯದಲ್ಲಿ ಒಟ್ಟಲಾದ ಕಷ್ಟಪಟ್ಟು ಸಾಲಾ ಸೋಲಾ ಮಾಡಿ ಬೆಳೆ ಒಂದು ಕಡೆ ಕೂಡಿ ಬೆಳೆಗೆ ಆಕಸ್ಮಿಕ ಬೆಂಕಿ ಬಿದ್ದು ಹೊತ್ತಿ ಉರಿದು ಲಕ್ಷಾಂತರ ರೂಪಾಯಿ ಬೆಳೆ ಕೊನೆ ಕ್ಷಣದಲ್ಲಿ ರೈತನ ಕೈ ತಪ್ಪಿ ಹೋಗುರುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ಊರ ಹೊರಗಿನ ಖುಲ್ಲಾ ಜಾಗದಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಯಿಂದಾಗಿ ಅನೇಕ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಕರಡಿಗುಡ್ಡ ಗ್ರಾಮದ ಅನೇಕ ರೈತರು ಕಡಲೆ ಹಾಗೂ ಹುರುಳಿ ಬೆಳೆಯ ಬೆಳೆಗಳನ್ನು ಮಶಿನ್‌ಗೆ ಹಾಕಿಸಲು ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದರು. ಆದರೆ, ಆಕಸ್ಮಿಕವಾಗಿ ಬಣವೆಗಳಿಗೆ ಬೆಂಕಿ ಹತ್ತಿದ್ದರಿಂದ ಅಪಾರ ಪ್ರಮಾಣದ ಕಡಲೆ ಹಾಗೂ ಹುರುಳಿ ಬೆಳೆ ಬೆಂಕಿಗೆ ಆಹುತಿಯಾಗಿದೆ.

ಇದರಿಂದಾಗಿ ಅಂದಾಜು 10 ಲಕ್ಷದಷ್ಟು ನಷ್ಟವುಂಟಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು. ಆದರೆ, ಅದಾಗಲೇ ಪರಿಸ್ಥಿತಿ ಕೈಮೀರಿ ಹೋಗಿ ಅನ್ನದಾತ ಕಷ್ಟಪಟ್ಟು ಬೆಳೆದ ಬಳೆ ಕೊನೆ ಕ್ಷಣದಲ್ಲಿ ರೈತನ ಕೈ ತಪ್ಪಿದೆ. ಜಿಲ್ಲಾಡಳಿತ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. ‌

- Advertisement -

Latest Posts

Don't Miss