Friday, July 4, 2025

Latest Posts

Dharwad News: ಧಾರವಾಡ ಎಎಸ್‌ಪಿ ನಾರಾಯಣ ಬರಮಣಿ ಸ್ವಯಂ ನಿವೃತ್ತಿಗೆ ನಿರ್ಧಾರ

- Advertisement -

Dharwad News: ಧಾರವಾಡ: ಧಾರವಾಡ ಎಎಸ್‌ಪಿ ನಾರಾಯಣ ಬರಮಣಿ ಅವರು ಸ್ವಯಂ ನಿವೃತ್ತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ

ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಅವರಿಂದ ಅಧಿಕಾರಿ ಅಪಮಾನಕ್ಕೆ ಒಳಗಾಗಿದ್ದರು. ಬೆಳಗಾವಿ ಸಮಾರಂಭದಲ್ಲಿ ಅಧಿಕಾರಿ ಮೇಲೆ ಸಿಎಂ ಕಪಾಳಮೋಕ್ಷಕ್ಕೆ ಮುಂದಾಗಿದ್ದರು. ಈ ಸನ್ನಿವೇಶದಿಂದ ಅಧಿಕಾರಿ ನೊಂದುಕೊಂಡಿದ್ದರು. ಅದೇ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಸ್ವಯಂಪ್ರೇರಿತ ನಿವೃತ್ತಿಗೆ ನಾರಾಯಣ ಅವರು ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಸಿಎಂ ಸಮ್ಮುಖದಲ್ಲಿ ಅಧಿಕಾರಿಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮನವೊಲಿಕೆಯಿಂದ ಅಧಿಕಾರಿ ಬರಮಣಿ ಅವರು ಸ್ವಲ್ಪಮಟ್ಟಿಗೆ ಶಾಂತವಾಗಿದ್ದಾರೆ.

ತಮಗಾದ ಅವಮಾನಕ್ಕೆ ಬರಮಣಿ ಅವರು ನೊಂದುಕೊಂಡಿದ್ದರು. ಹೀಗಾಗಿ, ಕೆಲಸದಿಂದಲೇ ಸ್ವಯಂ ನಿವೃತ್ತಿಗೆ ಮುಂದಾಗಿದ್ದರು. ಅಧಿಕಾರಿಯ ನಡೆಯಿಂದ ಸರ್ಕಾರಕ್ಕೆ ಮುಜುಗರ ಆಗಿದೆ.

- Advertisement -

Latest Posts

Don't Miss