Sunday, July 20, 2025

Latest Posts

Dharwad News: ಧಾರವಾಡದಲ್ಲಿ ಧಾರಾಕಾರ ಮಳೆ: ಕೊಚ್ಚಿಹೋದ ವ್ಯಕ್ತಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ನೀರು ತೆಗೆಯಲು ಜನರು ಹರಸಾಹಸ ಪಡುತ್ತಿದ್ದಾರೆ.

ಅಲ್ಲದೇ ಬೆಣ್ಣೆ ಹಳ್ಳದಲ್ಲಿ 1 ಕುಟುಂಬದ ನಾಲ್ವರು ಮತ್ತು 450 ಕುರಿಗಳು ಸಿಲುಕಿದ್ದು, ಧಾರವಾಡ ಜಿಲ್ಲೆಯ ಯಮನೂರ ಗ್ರಾಮಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೋಟ್ ಸಮೇತವಾಗಿ ಆಗಮಿಸಿದ್ದಾಾರೆ. ಸದ್ಯ ರಕ್ಷಣಾ ಕಾರ್ಯ ಪ್ರಾರಂಭವಾಗಿದೆ.

ಇನ್ನು ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ, ಧಾರಾಕಾರವಾಗಿ ಸುರಿದ ಮಳೆರಾಯನ ಅಬ್ಬರಕ್ಕೆ ಓರ್ವ ವ್ಯಕ್ತಿ ಕೊಚ್ಚಿಹೋಗಿದ್ದಾನೆ. ರಸ್ತೆಯ ಪಕ್ಕ ಚರಂಡಿ ಇದ್ದು, ವ್ಯಕ್ತಿ ಜಾರಿ ಬಿದ್ದು, ಕೊಚ್ಚಿಹೋಗಿದ್ದಾನೆ. ಬೀರಬಂದ ಓಣಿಯ ಹುಸೇನ ಕಳಸ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿಯಾಗಿದ್ದು, ಪೋಲೀಸರು ಹುಡುಕಾ” ನಡೆಸಿದ್ದು, ಇದುವರೆಗೆ ಹುಸೇನ್ ಪತ್ತೆಯಾಗಿಲ್ಲ.

- Advertisement -

Latest Posts

Don't Miss