Dharwad News: ಧಾರವಾಡದ ಏಲ್ಡ್ ಡಿಎಸ್ಪಿ ವೃತದ ಬಳಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಲೇರೊ ವಾಹನದ ಚಾಲಕನನ್ನು, ಹಿಡಿದು ತರುವಲ್ಲಿ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಅಗಸ್ಟ್ 7 ರಂದು ಬುಲೇರೊ ವಾಹನದ ಹಿಟ್ ಆ್ಯಂಡ್ ರನ್ನನಿಂದಾಗಿ ರೋಹಿತ ಜಗದೀಶ ಕುಂಬಾರ ಯುವಕ ಸಾವನಪ್ಪಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಬುಲೇರೋ ವಾಹನದ ಚಾಲಕ ಯಲ್ಲಪ್ಪ ಕುರಾಡೆ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನೂ ಬಂಧಿತ ಆರೋಪಿ ಯಲ್ಲಪ್ಪ ಬೆಳಗಾವಿ ಕಡೆಯಿಂದ ತನ್ನ ಬುಲೇರೊ ವಾಹನವನ್ನು ಧಾರವಾಡ ಹುಬ್ಬಳ್ಳಿ ಒಳ ಮಾರ್ಗವಾಗಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿಕೊಂಡು ಬಂರುವ ವೇಳೆ, ಓಲ್ಡ್ ಡಿ ಎಸ್ ಪಿ ವೃತದ ಬಳಿ ಬೈಕ್ ಸವಾರನಿಗೆ ವೇಗವಾಗಿ ಡಿಕ್ಕಿ ಪಡಿಸಿ ವಾಹನದ ಸಮೇತ ಪರಾರಿಯಾಗಿದ್ದನ್ನು. ಇದರ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು, ಸಿಸಿಟಿವಿಯ ಮೂಲಕ ಆರೋಪಿಯ ಜಾಡು ಹಿಡಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿ ತಂದಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.