Dharwad News: ಧಾರವಾಡ: ಧಾರವಾಡದಲ್ಲಿ ಪೈಪ್‌ಲೈನ್‌ನಿಂದ ಗ್ಯಾಸ್ ಲೀಕ್ ಆಗಿ, ರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಗ್ಯಾಸ್ ಪೈಪ್‌ಲೈನ್ ಬಸ್ಟ್ ಆದ ಪರಿಣಾಮ ಈ ಘಟನೆ ನಡೆದಿದೆ.
ಧಾರವಾಡದ ರಜತಗಿರಿಯಲ್ಲಿ ಈ ಘಟನೆ ನಡೆದಿದ್ದು, ಒಂದು ಭಾಗದ ಚರಂಡಿಯಲ್ಲಿ ಈ ಗ್ಯಾಸ್ ಪೈಪ್‌ಲೈನ್ ಬಸ್ಟ್ ಆಗಿದೆ. ಇದರಿಂದ ಅಲ್ಲಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದು, ದೊಡ್ಡ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಿದ್ದಾರೆ.



