Thursday, November 13, 2025

Latest Posts

Dharwad: ಅನಾಮಿಕನ ವಿರುದ್ಧ ಧಾರವಾಡದಲ್ಲಿ ಧರ್ಮಸ್ಥಳದ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ

- Advertisement -

Dharwad News: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ವಿರುದ್ದ ಅವಹೇಳನ ಕೆಲಸ ನಡಿತಾ ಇದೆ ಎಂದು ಆಗ್ರಹಿಸಿ ಧಾರವಾಡದಲ್ಲಿ ಧರ್ಮಸ್ಥಳದ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಸುಮಾರು ಸಾವಿರಾರು ಭಕ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಧರ್ಮಸ್ಥಳ ಹೆಸರು ಹಾಳು ಮಾಡುತ್ತಿರುವ ಮಹೇಶ ಶೆಟ್ಟಿ ತಿಮರೊಡಿ, ಗಿರೀಶ್ ಮಟ್ಟೆನ್ನವರ, ಸಮೀರ್ , ಸಂತೋಷ್ ಶೆಟ್ಟಿ, ಜಯಂತ ಟಿ, ಎಂಬುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯ ವಿರುದ್ದ ಪಿತೂರಿ ನಡಿತಾ ಇದೆ ಷಡ‌್ಯಂತ್ರ ನಡೆಸುವವರ ವಿರುದ್ದ ಕ್ರಮ ಕೈಗೋಳ್ಳಬೇಕು. ಆ ಅನಾಮಿಕ ವ್ಯಕ್ತಿಯ ಮಾತು ನಂಬಿ ಎಸ್ ಐ ಟಿ ತನಿಖೆ ಮಾಡಿಸುತ್ತಿದೆ. ಸರಕಾರ ಹಾಗೆ ಅನಾಮಿಕನ ಮೆಲೂ ತನಿಖೆಯನ್ನ ಮಾಡಿಸಬೇಕು ಉದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ಕಾಣದ ಕೈಗಳು ಆಡವಾಡುತ್ತಿವೆ ಎಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೊಶ ಹೊರ ಹಾಕಿದರು.

ಪಿತೂರಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಸಿದ್ದರಾಮಯ್ಯ, ಗೃಹ ಸಚಿವರಿಗೆ, ಪೋಲಿಸ್ ಮಹಾನಿರ್ದೆಶಕರಿಗೆ ಮನವಿಯನ್ನ ಸಲ್ಲಿಸಿದರು..

- Advertisement -

Latest Posts

Don't Miss