ಧಾರವಾಡದಲ್ಲಿ ಬಾವಿಗೆ ಜಿಗಿದು ಯುವತಿ ಆತ್ಮಹತ್ಯೆ: ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರ ಭೇಟಿ, ಪರಿಶೀಲನೆ.

Dharwad News: ಕುಳ್ಳಿ ಎಂದು ಮಾನಸಿಕವಾಗಿ ನೊಂದಿದ್ದ ಯುವತಿಯೊಬ್ಬಳ್ಳು ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಜಯನಗರದ ಬಳಿ ನಡೆದಿದೆ. ಧಾರವಾಡ ಜಯ ನಗರದ ನಿವಾಸಿಯಾಗಿದ್ದ ದೀಪಾ ಪಾಟೀಲ್ (27) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ.‌

ಇನ್ನೂ ದೀಪಾ ಹುಟ್ಟು ಕುಳ್ಳಿಯಾಗಿದ್ದು, ಎಲ್ಲರಂತೆ ನಾನು ಇಲ್ಲ ಎಂದು ನೊಂದಿದ್ದಳು ಎಂದು ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಸಂಜೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಘಟನೆಯ ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಲೆ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯೊಂದಿಗೆ ಸೇರಿ ಯುವತಿಯ ಮೃತದೇಹ ಹೊರ ತೆಗೆದಿದ್ದಾರೆ.

ಸದ್ಯ ಈಗ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ತನಿಖೆಯ‌ ನಂತರ ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ.

ಚರಂಡಿಯಲ್ಲಿ ಬಿದ್ದ ನಾಯಿ: ಆರೋಗ್ಯಧಿಕಾರಿಗಳ ನೇತೃತ್ವದಲ್ಲಿ ರಕ್ಷಣೆ

ಅಸಮಾಧಾನಿತ ನಾಯಕ ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ

ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ

About The Author