Sunday, September 8, 2024

Latest Posts

ಯುದ್ಧ ನಿಲ್ಸೋಕೆ ಯುದ್ಧಾನೇ ಮಾಡ್ಬೇಕು ಅಂದ್ರೆ ಯುದ್ಧಾನೇ ಮಾಡಣ ಬಾ..!

- Advertisement -

ಧ್ರುವ ಸರ್ಜಾ ಯುದ್ಧಕ್ಕಿಳೀತಿದ್ದಾರೆ. ಯುದ್ಧದಲ್ಲಿ ಧ್ರುವ ಅರ್ಜುನನಾದ್ರೆ ಪ್ರೇಮ್ ಶ್ರೀಕೃಷ್ಣ. ಯಾವ ಪ್ರೇಮ್ ಅನ್ಕೊತಿದ್ದೀರಾ..? ಇನ್ಯಾರು ನಮ್ಮ ಜೋಗಿ ಪ್ರೇಮ್. ಹೌದು ಧ್ರುವ ಸರ್ಜಾ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಟೈಟಲ್ ಫಿಕ್ಸ್ ಆಗದಿದ್ರೂ ಹಿಂದಿನಿAದಲೂ ಈ ಸಿನಿಮಾದ ಟೈಟಲ್ ಯುದ್ಧ ಅನ್ನೋ ಸುದ್ದಿ ಚಾಲ್ತಿಯಲ್ಲಿದೆ.
ಇಲ್ಲಿ ಯುದ್ಧ ಮಾಡೋಕೆ ಧ್ರುವ ಸರ್ಜಾ ಇನ್ನೂ ತಯಾರಾಗಬೇಕು, ಯಾಕಂದ್ರೆ ಮಾರ್ಟಿನ್ ಶೂಟಿಂಗ್ ಇನ್ನೂ ಮುಗಿದಿಲ್ಲ.
ಆದ್ರೆ ಈಗ ರ‍್ತಿರೋ ಯುದ್ಧ ೩ ಕಾರಣಗಳಿಗೆ ಸ್ಯಾಂಡಲ್ವುಡ್ ಮಾತ್ರ ಅಲ್ಲ ದೇಶದ ಬಹುನಿರೀಕ್ಷಿತ ಸಿನಿಮಾ ಆಗೋದ್ರಲ್ಲಿ ಅನುಮಾನವೇ ಇಲ್ಲ. ಮೊದಲ ಕಾರಣ, ಪ್ರೇಮ್. ಜೋಗಿ ಪ್ರೇಮ್ ನಿರ್ದೇಶನಕ್ಕೊಂದು ಸ್ಟಾರ್ ವ್ಯಾಲ್ಯೂ ಇದೆ. ಎರಡನೇ ಕಾರಣ, ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾಗಳು ಅಂದ್ರೆ ಅದರ ಸ್ಕೇಲ್ ಪ್ಯಾನ್ ಇಂಡಿಯಾಗೆ ಆಗೋದು ಕನ್ಫರ್ಮ್. ಮೂರನೇ ಕಾರಣ, ಧ್ರುವ ಸರ್ಜಾ. ಇಲ್ಲಿ ಇನ್ನೊಂದು ಶಕ್ತಿ ಅಂದ್ರೆ ಧ್ರುವ ಇಮೋಷನಲ್ ಅಭಿನಯ ಜೋಗಿ ಪ್ರೇಮ್ ಕೊಡುವ ಇಮೋಷನಲ್ ಸ್ಕಿçಪ್ಟ್ ಇವೆರಡೂ ಸೇರಿಕೊಂಡ್ರೆ ಅಲ್ಲೊಂದು ಅದ್ಭುತ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ.
ಸದ್ಯ ಚಿತ್ರದ ಮುಹೂರ್ತ ಏಪ್ರಿಲ್ ೨೪ಕ್ಕೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಲಿದ್ದು, ಮುಹೂರ್ತಕ್ಕೊಂದು ಲುಕ್ ರಿಲೀಸ್ ಆಗಿದೆ. ಪೋಸ್ಟರ್‌ನಲ್ಲಿ ೧೯೭೦ ಅನ್ನೋ ಇಸ್ವಿ ಜೊತೆಗೆ ವಿಧಾನಸೌಧವೂ ಕಾಣುತ್ತಿದೆ, ಅಲ್ಲಿಗೆ ಇಲ್ಲೊಂದು ರಾಜಕೀಯ ಹೈಡ್ರಾಮಾ ಇರೋದು ಕನ್ಫರ್ಮ್. ಇನ್ನು ರೌಡೀಯಿಸಂ ಇಲ್ಲದೇ ಪ್ರೇಮ್ ಸಿನಿಮಾ ಇರೋಕೆ ಸಾಧ್ಯಾನಾ..? ಒಟ್ಟಾರೆ ಸಿನಿಮಾದ ಮುಹೂರ್ತದ ದಿನವೇ ಟೈಟಲ್ ಕೂಡ ರಿವೀಲ್ ಆದ್ರೆ ಯುದ್ಧ ಆರಂಭವಾಗಲಿದೆ.

- Advertisement -

Latest Posts

Don't Miss