Sunday, December 22, 2024

Latest Posts

‘ಪೊಗರು’ ಸಿನಿಮಾ ನೋಡಿ ಧ್ರುವ ಸರ್ಜಾ ಪತ್ನಿ ಹೀಗಾ ಹೇಳೋದು…?

- Advertisement -

ಪೊಗರು ಸಿನಿಮಾದ ಒಂದಷ್ಟು ವಿವಾದಗಳು, ಗಲಾಟೆ, ಗದ್ದಲ ಎಲ್ಲದಕ್ಕೂ ಫುಲ್ ಸ್ಟಾಪ್ ಬಿದಿದ್ದು, ಬಾಕ್ಸ್ ಆಫೀಸ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿ ಹಣ ಕಲೆಕ್ಟ್ ಮಾಡ್ತಿದ್ದಾರೆ. ಜಸ್ಟ್ ಆರು ದಿನದಲ್ಲಿಯೇ 45 ಕೋಟಿ ರೂಪಾಯಿ ಗಳಿಸಿರುವ ಧ್ರುವ ಸಿನಿಮಾಕ್ಕೆ ಪ್ರೇಕ್ಷಕ ಜೈಕಾರ ಹಾಕ್ತಿದ್ದಾನೆ. ಅಭಿಮಾನಿಗಳು, ಸಿನಿಪ್ರಿಯರು ಮೆಚ್ಚಿರುವ ಪೊಗರು ಸಿನಿಮಾ ನೋಡಿ ಧ್ರುವ ಪತ್ನಿ ಪ್ರೇರಣಾ ಶಾಕ್ ಆಗಿದ್ದರಂತೆ. ಏನಿಷ್ಟು ರೂಡ್ ಆಗಿ ಕಾಣಿಸ್ತಿದ್ದೀಯಾ..? ತಂಗಿ ಸೆಂಟಿಮೆಂಟ್ ದೃಶ್ಯ ನೋಡಿ ಗುಡ್ ಅಂದ್ಲು ಅಂತಾ ಧ್ರುವ ಇವತ್ತು ನಡೆದ ಪ್ರೆಸ್ ಮೀಟ್ ನಲ್ಲಿ ಹೇಳಿದ್ದಾರೆ.


ಅಂದಹಾಗೇ ಪೊಗರು ಸಿನಿಮಾವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದು, ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿಯೂ ಸಿನಿಮಾ ರಿಲೀಸ್ ಆಗಿ ಸೂಪರ್ ಸಕ್ಸಸ್ ಕಾಣ್ತಿದೆ.

- Advertisement -

Latest Posts

Don't Miss