Political News: ಡಯಾಲಿಸಿಸ್ ಸಮಸ್ಯೆ ಬಗ್ಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದು, ಇದು ಹಿಂದಿನ ಸರ್ಕಾರ ಇರುವಾಗಲೇ ಆದ ಎಡವಟ್ಟೇ ಹೊರತು, ನಮ್ಮ ಸರ್ಕಾರದ್ದಲ್ಲ ಎಂದಿದ್ದಾರೆ.
ಡಯಾಲಿಸಿಸ್ ಸಮಸ್ಯೆಗೆ ಹಿಂದಿನ ಸರ್ಕಾರದಲ್ಲಾದ ಎಡವಟ್ಟುಗಳು ಕಾರಣವೇ ಹೊರತು, ನಮ್ಮ ಸರ್ಕಾರದಿಂದ ಆಗಿದ್ದಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗಬಾರದು.
ನಾನು ಆರೋಗ್ಯ ಸಚಿವನಾದ ಬಳಿಕ ಡಯಾಲಿಸಿಸ್ ಕೇಂದ್ರಗಳನ್ನು ಸುವ್ಯವಸ್ಥೆಗೆ ತರುವತ್ತ ಹೆಚ್ಚಿನ ಗಮನ ಹರಿಸಿದ್ದೇನೆ. ಪಿಪಿಪಿ ಮಾದರಿಯಲ್ಲಿ ರಾಜ್ಯಾದ್ಯಂತ 800 ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲು ಕ್ರಮ ವಹಿಸಲಾಗುತ್ತಿದೆ.
ಸಿಬ್ಬಂದಿಗಳ ವೇತನ, ಹಾಗೂ ESI PF ಹಿಂದಿನ ಸರ್ಕಾರದ ಅವಧಿಯಲ್ಲಿ BRS ಮತ್ತು ESKAG ಸಂಸ್ಥೆಯವರು ಬಾಕಿ ಉಳಿಸಿಕೊಂಡಿದ್ದಾರೆ. ಈ ಎರಡು ಸಂಸ್ಥೆಗಳ ಬಗ್ಗೆ ಸಾರ್ವಜನಿಕರು, ಸಿಬ್ಬಂದಿಗಳಿಂದ ಸಾಕಷ್ಟು ದೂರುಗಳು ಬಂದಿದ್ದವು. ಜಿಲ್ಲಾ ಪ್ರವಾಸದ ವೇಳೆ ಹಲವು ಕಡೆ ನಾನು ಡಯಾಲಿಸಿಸ್ ಕೇಂದ್ರಗಳು ಸರಿಯಾಗಿ ನಿರ್ವಹಣೆ ಆಗದಿರುವುದನ್ನ ಗಮನಿಸಿದ್ದೆ.
ಹೀಗಾಗಿ ಡಯಾಲಿಸಿಸ್ ಕೇಂದ್ರಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ನಾಲ್ಕು ವಿಭಾಗವಾರು ಟೆಂಡರ್ ಆಹ್ವಾನಿಸಿ ಬಹುತೇಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಎಲ್ಲೆಡೆ ಸೊಂಕು ರಹಿತ ಏಕಬಳಕೆಯ ಡಯಾಲಿಸಿಸ್ ಯಂತ್ರಗಳು ಬರಲಿವೆ. ಉತ್ತಮ ಡಯಾಲಿಸಿಸ್ ಸೇವೆ ಜನಸಾಮಾನ್ಯರಿಗೆ ದೊರೆಯಲಿದೆ. ವ್ಯವಸ್ಥೆ ಸರಿಪಡಿಸಲು ಸಿಬ್ಬಂದಿಗಳು ಸಹಕರಿಸಬೇಕು ಎಂದು ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಡಯಾಲಿಸಿಸ್ ಸಮಸ್ಯೆಗೆ ಹಿಂದಿನ ಸರ್ಕಾರದಲ್ಲಾದ ಎಡವಟ್ಟುಗಳು ಕಾರಣವೇ ಹೊರತು, ನಮ್ಮ ಸರ್ಕಾರದಿಂದ ಆಗಿದ್ದಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗಬಾರದು.
ನಾನು ಆರೋಗ್ಯ ಸಚಿವನಾದ ಬಳಿಕ ಡಯಾಲಿಸಿಸ್ ಕೇಂದ್ರಗಳನ್ನು ಸುವ್ಯವಸ್ಥೆಗೆ ತರುವತ್ತ ಹೆಚ್ಚಿನ ಗಮನ ಹರಿಸಿದ್ದೇನೆ. ಪಿಪಿಪಿ ಮಾದರಿಯಲ್ಲಿ ರಾಜ್ಯಾದ್ಯಂತ 800 ಏಕ ಬಳಕೆಯ ಡಯಾಲಿಸಿಸ್… pic.twitter.com/q7gZU1dP2T
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 2, 2023
‘ಬಾಂಬ್ ಎಲ್ಲಿ ಸ್ಫೋಟ ಆಗಿದೆ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರ್ತವೆ’
‘ಕೇಂದ್ರ ಸರಕಾರದ ನೆರವು ಪಡೆದು ಈ ಬಗ್ಗೆ ಕಾರ್ಯಾಚರಣೆ ನಡೆಸಲು ಕಾಂಗ್ರೆಸ್ ಮಿನಾಮೇಷ ಎಣಿಸಬಾರದು’
ಭ್ರೂಣ ಹತ್ಯೆ ವಿಚಾರ: ಪೊಲೀಸ್ ಇಲಾಖೆ, ನಮ್ಮ ಇಲಾಖೆ ಕೈ ಜೋಡಿಸಿ ತನಿಖೆ ಮಾಡಿಸುತ್ತೇವೆ: ಸಚಿವ ಗುಂಡೂರಾವ್