Tuesday, May 6, 2025

Latest Posts

ಸಚಿವ ಸ್ಥಾನಕ್ಕೇರಲಿದ್ದಾರಾ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್..?

- Advertisement -

Spiritual: ಯಾರೂ ಕೂಡ ಪ್ರದೀಪ್ ಈಶ್ವರ್ ಅಂಥ ಹುಡುಗ, ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಅಂಥವರನ್ನು ಸೋಲಿಸಿ, ಚಿಕ್ಕಬಳ್ಳಾಪುರದ ಶಾಸಕ ಪಟ್ಟಕ್ಕೇರುತ್ತಾರೆಂದು ಊಹಿಸಿರಲಿಲ್ಲ. ತಮ್ಮದೇ ಅಕಾಡೆಮಿ ಮೂಲಕ ಹೆಸರು ಮಾಡಿದ್ದ ಪ್ರದೀಪ್, ಇದೀಗ ಶಾಸಕರಾಗಿ, ತಮ್ಮ ಭಾಷಣ, ಕೆಲಸದಿಂದ ಸದ್ದು ಮಾಡುತ್ತಿದ್ದಾರೆ.

ಇವರ ಬಗ್ಗೆ ಜ್ಯೋತಿಷಿಗಳಾದ ನಾರಾಯಣ ರೆಡ್ಡಿ ಗುರೂಜಿ ಮಾತನಾಡಿದ್ದು, ಪ್ರದೀಪ್ ಈಶ್ವರ್‌ಗೆ ಧ್ವಜ ಕೀರ್ತಿ ಯೋಗ ಇದೆ ಎಂದಿದ್ದಾರೆ. ಈ ಕಾರಣಕ್ಕೆ ಅವರಿಗೆ ಮಂತ್ರಿ ಸ್ಥಾನವೂ ಸಿಗಬಹುದು. ಅದೃಷ್ಟವಿದ್ದರೆ, ಸಿಎಂ ಸ್ಥಾನವೂ ಸಿಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಕನ್ಯಾ ರಾಶಿಯವರಾದ ಪ್ರದೀಪ್ ಈಶ್ವರ್ ಅವರಿಗೆ ಸದ್ಯ ಶನಿ ಕೇತು ಸಂಯೋಗ ಇದ್ದು, ಊಹಿಸಲಾರದ ಕೀರ್ತಿ ಅವರಿಗೆ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇಲ್ಲಿ ಧ್ವಜ ಎಂದರೆ ಸರ್ಕಾರ. ಕೀರ್ತಿ ಎಂದರೆ, ಸರ್ಕಾರದಿಂದ ಪಡೆಯಲಿರುವ ಕೀರ್ತಿ. ಹಾಗಾಗಿ ಪ್ರದೀಪ್ ಈಶ್ವರ್‌ಗೆ ಸಚಿವ ಸ್ಥಾನ ಸಿಗುವ ಎಲ್ಲಾ ಸಾಧ್ಯತೆಗಳಿದೆ. ಶಿವನ ಕೃಪೆ ಪ್ರದೀಪ್ ಈಶ್ವರ್ ಮೇಲಿದ್ದು, ಇದೇ ಕೃಪೆಯಿಂದ ಉಚ್ಛ ಸ್ಥಾನಕ್ಕೇರಲಿದ್ದಾರೆಂದು ನಾರಾಯಣ ರೆಡ್ಡಿ ಗುರೂಜಿ ಭವಿಷ್ಯ ನುಡಿದಿದ್ದಾರೆ.

VidhanaSabha : ವಿಪಕ್ಷನಾಯಕನಿಲ್ಲದೆ ಸದನ ಕಲಾಪ ಮುಕ್ತಾಯ ..! ಇತಿಹಾಸದಲ್ಲೇ ಮೊದಲು..!

- Advertisement -

Latest Posts

Don't Miss