Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು ರೂಪಾ ಅಯ್ಯರ್.
ಆಧ್ಯಾತ್ಮ ಚಿಂತಕಿ ಕೂಡ ಆಗಿರುವ ರೂಪಾ ಅವರು ರಾಜಕೀಯದಲ್ಲೂ ಮಿಂಚಿದ್ದು, ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಾರೆ. ಆದರೆ ಅವರು ಚುನಾವಣೆ ಟಿಕೇಟ್‌ಗಾಗಿ ಲಾಬಿ ಮಾಡಿದ್ರು, ದೆಹಲಿಗೆ ಹೋಗಿ ಕೂತಿದ್ರು ಅನ್ನೋ ಮಾತು ಅವರ ಬಗ್ಗೆ ಕೇಳಿ ಬಂದಿತ್ತು.
ಈ ಬಗ್ಗೆ ಉತ್ತರಿಸಿರುವ ರೂಪಾ ಐಯರ್, ನಮ್ಮ ಫ್ಯಾಮಿಲಿಯವರಲ್ಲಿ ಹೆಚ್ಚಿನವರು ಆರ್‌ಎಸ್‌ಎಸ್‌ನಲ್ಲಿ ಇದ್ದರು. ಹಾಗಂತ ನಾವು ಬೇರೆ ಪಕ್ಷ, ಜಾತಿಯನ್ನು ನಾವು ಯಾವತ್ತೂ ಕಡೆಗಣಿಸಿಲ್ಲ. ಏಕೆಂದರೆ, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ನನಗೆ ಬರುತ್ತಿದ್ದ ವಿದ್ಯಾರ್ಥಿ ವೇತನದಿಂದ ನಾನು ವಿದ್ಯೆ ಕಲಿತಿದ್ದೇನೆ. ಅದೇ ರೀತಿ ನಾನು ಮೋದಿ, ದೇವೇಗೌಡರು ಎಲ್ಲರನ್ನೂ ನಾನು ಗೌರವಿಸುತ್ತೇನೆ.
ಏಕೆಂದರೆ, ನಾನು ಯಾರನ್ನೂ ದ್ವೇಷಿಸುವುದಿಲ್ಲ. ಹಲವರು ಜಾತಿ, ಮತ, ಧರ್ಮ ಎಂದು ಜಗಳ ಹಚ್ಚುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಯುವ ಪೀಳಿಗೆಯವರಿಗೆ ಹೆಚ್ಚು ಬೆಂಬಲ ನೀಡಲಾಗುತ್ತಿದೆ. ಬಿಜೆಪಿಯಲ್ಲೂ ನನಗೆ ಉತ್ತಮ ಸ್ಥಾನ ಬೆಂಬಲ ಎಲ್ಲವೂ ಸಿಗುತ್ತಿದೆ ಎಂದು ರೂಪಾ ಅಯ್ಯರ್ ಹೇಳಿದ್ದಾರೆ.
ಇನ್ನು ದೆಹಲಿಗೆ ಹೋಗುತ್ತಿರುವ ಬಗ್ಗೆ ಮಾತನಾಡಿರುವ ರೂಪಾ ಅಯ್ಯರ್, ನನ್ನ ಸಿನಿಮಾ ರೆಡಿಯಾಗುತ್ತಿದ್ದು ಅದಕ್ಕಾಗಿ ನಾನು ದೆಹಲಿಗೆ ಹೋಗುತ್ತಿರುತ್ತೇನೆ. ಅಲ್ಲದೇ, ದಕ್ಷಿಣ ಭಾರತದ ಬಿಜೆಪಿ ಯೋಜನೆಗೆ ನಾನು ಅಂಬಾಸೀಡರ್ ಆಗಿದ್ದು, ಅವರಿಗೆಲ್ಲ ನಾನು ಸಹಾಯ ಮಾಡಬೇಕು ಎಂದು ನಾನು ಡೈರೆಕ್ಟ್ ದೆಹಲಿಗೆ ಹೋಗಿ ಹೋರಾಟ ಮಾಡುತ್ತೇನೆ. ಇನ್ನು ರಾಜಕೀಯದಲ್ಲಿದ್ದಾಗ ನಾವು ಚುನಾವಣೆಗೆ ಟಿಕೇಟ್ ಪಡೆಯಲು ಸಕಲ ಪ್ರಯತ್ನ ಮಾಡಬೇಕಾಗುತ್ತದೆ. ಹಾಗಾಗಿ ನಾನು ಟಿಕೇಟ್‌ಗಾಗಿ ಪ್ರಯತ್ನಿಸಿದ್ದೇನೆ ಎಂದಿದ್ದಾರೆ ರೂಪಾ ಅಯ್ಯರ್.




