Monday, April 14, 2025

Latest Posts

ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ಕೊಟ್ಟರಾ ಕೇಂದ್ರ ಸಚಿವ ನಾರಾಯಣಸ್ವಾಮಿ..?

- Advertisement -

Political News: ಚಿತ್ರದುರ್ಗ: ಕೇಂದ್ರ ಸಚಿವ ನಾರಾಯಣಸ್ವಾಮಿ ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ಕೊಟ್ಟಿದ್ದು, ರಾಜಕೀಯದಿಂದ ದೂರ ಉಳಿಯುವ ಮಾತನ್ನಾಡಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವರು, ಇಂಥ ಕಲುಷಿತ ರಾಜಕೀಯದಲ್ಲಿ ನನ್ನಂಥವರು ಇರಬಾರದು ಎಂದು ತೀರ್ಮಾನಿಸಿದ್ದೇನೆ. ನನ್ನ 25 ವರ್ಷದ ರಾಜಕೀಯ ಪಯಣದಲ್ಲಿ ಬೇಕಾದಷ್ಟು ಭ್ರಷ್ಟಾಚಾರವನ್ನು ಕಂಡಿದ್ದೇನೆ. ಇಂಥ ರಾಜಕೀಯ ಭ್ರಷ್ಟ ವ್ಯವಸ್ಥೆ ಕಂಡು, ರಾಜಕೀಯ ಬಿಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೇ, ಭ್ರಷ್ಟರ ಜೊತೆ ನಾನೂ ಒಬ್ಬ ಆಗಬಾರದು. ನಾನು ಇಂಥವರ ಜೊತೆ ರಾಜೀಯಾಗಬಾರದು. ಭ್ರಷ್ಟಾಚಾರದ ಕುರ್ಚಿಯ ಪಕ್ಕ ಕುಳಿತುಕೊಳ್ಳಲು ಕೂಡ ನಾನು ಇಷ್ಟಪಡುವುದಿಲ್ಲ. ಇದು ಬರೀ ಮುಂಬರುವ ಚುನಾವಣೆಗೆ ಮಾತ್ರವಲ್ಲ. ಭವಿಷ್ಯ ರಾಜಕಾರಣದಿಂದಲೇ, ಹೊರಗುಳಿಯಲು ನಿರ್ಧರಿಸಿದ್ದೇನೆ. ಹಾಗಾಗಿ ಈ ಬಾರಿ ನಾನು ಟಿಕೇಟ್ ಆಕಾಂಕ್ಷಿಯಲ್ಲಿ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ.

ಸಚಿವರ ಪ್ರೈವೇಟ್ ಜೆಟ್‌ನಲ್ಲಿ ಸಿಎಂ ಪ್ರಯಾಣಿಸಿದ್ದಕ್ಕೆ ಬಿಜೆಪಿ ಅಸಮಾಧಾನ: ಸಿದ್ದು ತಿರುಗೇಟು

ಉಡುಪಿ ಕೃಷ್ಣಮಠಕ್ಕೆ ಭೇಟಿ ಕೊಟ್ಟ ನಟಿ ಸಾಯಿ ಪಲ್ಲವಿ

ರಾಜ್ಯದಲ್ಲಿ ಹಿಜಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ

- Advertisement -

Latest Posts

Don't Miss