Thursday, November 7, 2024

Latest Posts

ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?

- Advertisement -

National News: ವಿವೇಕ್ ಬಿಂದ್ರಾ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಇವರು ಪ್ರಸಿದ್ಧ ಯೂಟ್ಯೂಬರ್. ಜೊತೆಗೆ ಉದ್ಯಮದ ಬಗ್ಗೆ ಅತ್ಯುತ್ತಮವಾಗಿ ಟಿಪ್ಸ್ ಕೊಡುತ್ತಾರೆ. ಮೋಟಿವೇಶನಲ್ ಸ್ಪೀಕರ್‌. ಆದರೆ ಇವರ ಮೇಲೆ ದೈಹಿಕ ಹಿಂಸೆಯ ಆರೋಪ ಕೇಳಿಬಂದಿದ್ದು, ಮದುವೆಯಾದ ಕೆಲ ಗಂಟೆಯಲ್ಲೇ, ವಿವೇಕ್ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರಂತೆ. ಅಲ್ಲದೇ, ಆ ಹಲ್ಲೆಯಿಂದ ಆಕೆಯ ಒಂದು ಕಿವಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಡಿಸೆಂಬರ್ 6ರಂದು ವಿವೇಕ್ ಮತ್ತು ಯಾನಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮನೆಗೆ ಬಂದ ಕೆಲ ಗಂಟೆಗಳಲ್ಲೇ, ವಿವೇಕ್ ಮತ್ತು ಅವರ ತಾಯಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಯಾನಿಕಾ ಮಧ್ಯಸ್ಥಿಕೆ ವಹಿಸಲು ಹೋಗಿದ್ದು, ವಿವೇಕ್ ಈಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಯಾನಿಕಾ ಗೇಟ್‌ ತೆಗೆದು ಹೊರಹೋಗಲು ಯತ್ನಿಸಿದ್ದಾರೆ. ಆಗ ಓಡಿ ಬಂದ ಬಿಂದ್ರಾ, ಎಲ್ಲರೂ ನಮ್ಮನ್ನೇ ನೋಡುತ್ತಿದ್ದಾರೆ. ಒಳಗೆ ಬಾ ಎಂದು ಆಕೆಯನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದವರು, ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಕೆಲ ಹೊತ್ತಿನ ಬಳಿಕ ಆಕೆ ತನ್ನವರ ಸಹಾಯದಿಂದ ಹತ್ತಿರದ ಪೊಲೀಸ್ ಠಾಣೆಯಲ್ಲಿ, ವಿವೇಕ್ ಬಿಂದ್ರಾ ವಿರುದ್ಧ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಯಾನಿಕಾರನ್ನು ರೂಮಿನಲ್ಲಿ ಕೂಡಿ ಹಾಕಿ ಥಳಿಸಿದ್ದಲ್ಲದೇ, ಆಕೆಯ ಕೂದಲನ್ನು ಎಳೆದುಕೊಂಡು ಹೋಗಿದ್ದಾರೆ. ಹಲ್ಲೆ ಮಾಡುವ ವೇಳೆ, ಯಾನಿಕಾ ದೇಹದ ಮೇಲೆ ಗಾಯಗಳಾಗಿದ್ದು,  ಆಕೆಯ ಒಂದು ಕಿವಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ದೂರಿನಲ್ಲಿ ಹೇಳಲಾಗಿದೆ.

ಸಚಿವರ ಪ್ರೈವೇಟ್ ಜೆಟ್‌ನಲ್ಲಿ ಸಿಎಂ ಪ್ರಯಾಣಿಸಿದ್ದಕ್ಕೆ ಬಿಜೆಪಿ ಅಸಮಾಧಾನ: ಸಿದ್ದು ತಿರುಗೇಟು

ಉಡುಪಿ ಕೃಷ್ಣಮಠಕ್ಕೆ ಭೇಟಿ ಕೊಟ್ಟ ನಟಿ ಸಾಯಿ ಪಲ್ಲವಿ

ರಾಜ್ಯದಲ್ಲಿ ಹಿಜಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ

- Advertisement -

Latest Posts

Don't Miss