News: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯಾವ ರೀತಿ ಅಭಿವೃದ್ಧಿಯಾಗುತ್ತಿದೆಯೋ, ಅದೇ ರೀತಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಜೊತೆಗೆ ಅಪ್ಪಿತಪ್ಪಿ ಒಬ್ಬರ ಅಕೌಂಟ್‌ನಿಂದ ಇ್ನನೊಬ್ಬರ ಅಕೌಂಟ್‌ಗೆ ಹಣ ಹೋಗುತ್ತಿದೆ. ಕೆಲವರು ಹಣವನ್ನು ಮೋಸದಿಂದಲೂ ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವಿಂದು ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾದ್ರೆ, ಅದನ್ನು ಹೇಗೆ ಹಿಂಪಡೆಯಬೇಕು ಎಂದು ಹೇಳಲಿದ್ದೇವೆ.
ಓರ್ವ ಯುವತಿ ಆನ್‌ಲೈನ್‌ಲ್ಲಿ ಶಾಪಿಂಗ್ ಮಾಡಿ, ಕೆಲ ವಸ್ತುಗಳನ್ನು ಆರ್ಡರ್ ಹಾಕಿದ್ದರು. ಆದರೆ ಅವರ ಆರ್ಡರ್ ಸ್ಟಕ್ ಆಗಿದ್ದು, ಬೇಗ ಪೇಮೆಂಟ್ ಆದರೆ ವಸ್ತು ಡಿವೆಲರಿ ಆಗುತ್ತದೆ ಎಂದು ಹೇಳಲಾಗಿತ್ತು. ಆಕೆ ಆ ವಸ್ತುವಿಗೆ ಎಷ್ಟು ಬೆಲೆ ಇದೆಯೋ, ಅಷ್ಟೇ ಬೆಲೆಯನ್ನು ಪೇ ಮಾಡಿದ್ದಳು. ಆದರೆ ಆಕೆಯ ಅಕೌಂಟ್‌ನಿಂದ ಹೆಚ್ಚು ಹಣ ಡ್ರಾ ಆಗಿತ್ತು.
ಈ ಬಗ್ಗೆ ಆಕೆ ಪೊಲೀಸರಿಗೆ ದೂರು ನೀಡಿದರೆ, ಅಲ್ಲಿ ಆಕೆಯದ್ದೇ ತಪ್ಪು ಎಂದು ಕೇಸ್ ಕ್ಲೋಸ್ ಮಾಡಿ ಕಳುಹಿಸಲಾಯಿತು. ಯಾವುದಕ್ಕೂ ಜಗ್ಗದ ಮಹಿಳೆ, ಸಿವಿಲ್ ಕೋರ್ಟ್‌ಗೆ ಹೋಗಿ, ದೂರು ದಾಖಲಿಸಿ, ಬರೀ 2 ತಿಂಗಳೊಳಗೆ ಕಳೆದು ಹೋಗಿದ್ದ ತನ್ನ ಲಕ್ಷ ಲಕ್ಷ ಹಣ ಅಕೌಂಟ್‌ಗೆ ಮರುಪಾವತಿಯಾಗುವಂತೆ ಮಾಡಿಕೊಂಡಿದ್ದರು.
ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ಹಣ ಖಾಲಿ ಆದ್ರೆ, ಅಥವಾ ನಿಮಗೆ ಗೊತ್ತಿಲ್ಲದೇ, ನಿಮ್ಮ ಬ್ಯಾಂಕ್‌ನಿಂದ ಹಣ ಟ್ರಾನ್ಸಫರ್ ಆದ್ರೆ, ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್‌ಗೆ ಕಾಲ್ ಮಾಡಿ, ನಿಮ್ಮ ಅಕೌಂಟ್ ಫ್ರೀಜ್ ಮಾಡಿಸಿ.
ಎರಡನೇಯದಾಗಿ ತ್ವರಿತಗತಿಯಲ್ಲಿ ಭಾರತದ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನಂಬರ್ ಆಗಿರುವ 1930 ಎಂಬ ನಂಬರ್‌ಗೆ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಹಣ ಹೋದ ಬಗ್ಗೆ ವಿವರಿಸಿ, ಕಂಪ್ಲೇಂಟ್ ಕೊಡಿ.
ಈಗಲೂ ನಿಮ್ಮ ಹಣ ನಿಮ್ಮ ಅಕೌಂಟ್‌ಗೆ ಮರುಪಾವತಿಯಾಗದಿದ್ದಲ್ಲಿ, ಸಿವಿಲ್ ಕೋರ್ಟ್‌ಗೆ ಹೋಗಿ, ಅಲ್ಲಿ ದೂರು ದಾಖಲಿಸಿ, ಡಿಸಿಪಿಯೊಂದಿಗೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಇದರಿಂದ ನಿಮ್ಮ ಅಕೌಂಟ್‌ನಿಂದ ಕಳೆದು ಹೋಗಿರುವ ದುಡ್ಡು ನಿಮಗೆ ವಾಪಸ್ ಸಿಗುತ್ತದೆ.