ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗೋಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಅದು ದುಡ್ಡಿರೋರಿಗೆ ಮಾತ್ರ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ನೀವು ಚಿಕ್ಕ ಪುಟ್ಟ ಹೊಟೇಲ್‌ಗಳಿಗೆ ಹೋಗಿರ್ತೀವಿ. ವೆರೈಟಿ ತಿಂಡಿ ತಿಂದಿರ್ತೀವಿ. ಆದ್ರೆ ವಿಶ್ವದಲ್ಲಿರುವ ಕೆಲವು ವಿಚಿತ್ರ ರೆಸ್ಟೋರೆಂಟ್ಗಳ ಬಗ್ಗೆ ನೀವು ತಿಳಿದಿರೋಕ್ಕೆ ಸಾಧ್ಯಾನೇ ಇಲ್ಲ. ಅಂಥ ರೆಸ್ಟೋರೆಂಟ್‌ಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ನೀಡಲಿದ್ದೇವೆ.
ಬ್ಲೈಂಡ್ ಕೆಫೆ ಕೆನಡಾ. ಈ ರೆಸ್ಟೋರೆಂಟ್‌ನಲ್ಲಿ ನೀವು ಊಟ ಮಾಡ್ಬೇಕು ಅಂದ್ರೆ ಕತ್ತಲಲ್ಲೇ ಊಟ ಮಾಡ್ಬೇಕು. ಇಲ್ಲಿ ನಿಮಗೆ ಊಟವನ್ನ ನೀಡೋ ವೇಟರ್‌ಗಳು ಕೂಡಾ ಅಂಧರಾಗಿರ್ತಾರೆ. ಆದ್ರೆ ಅವರು ತಮ್ಮ ಕೆಲಸದಲ್ಲಿ ನಿಸ್ಸೀಮರಾಗಿರ್ತಾರೆ. ಇನ್ನು ನೀವು ಈ ರೆಸ್ಟೋರೆಂಟ್‌ನಲ್ಲಿ ಟಾರ್ಚ್, ಮೊಬೈಲ್ ಬಳಕೆ ಮಾಡುವಂತಿಲ್ಲ. ಕತ್ತಲ ಕೋಣೆಗೆ ನಿಮ್ಮನ್ನು ಕರೆದುಕೊಂಡು ಹೋಗಿ, ನಿಮಗೆ ಬೇಕಾದ ಆಹಾರವನ್ನ ಸರಬರಾಜು ಮಾಡಲಾಗತ್ತೆ. ಅದನ್ನ ನೀವು ಅಲ್ಲೇ ತಿನ್ನಬೇಕು. ಇಲ್ಲಿ ನನನಿಮಗೆ ಆಹಾರ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಇನ್ನು ಇಲ್ಲಿ ಕತ್ತಲಲ್ಲಿ ಊಟ ಕೊಡಲು ಕಾರಣವೇನೆಂದರೆ, ನೀವು ಕತ್ತಲಲ್ಲಿ ಊಟ ಮಾಡುವಾಗ, ಹೆಚ್ಚು ಗಮನ ಕೊಟ್ಟು, ಸ್ವಾದವನ್ನ ಎಂಜಾಯ್ ಮಾಡುತ್ತಾ ಊಟ ಮಾಡುತ್ತೀರಿ ಎಂದು.
ಎರಡನೇಯ ರೆಸ್ಟೋರೆಂಟ್, ಈಥಾ ರೆಸ್ಟೋರೆಂಟ್ ಮಾಲ್ಡೀವ್ಸ್. ಮಾಲ್ಡೀವ್ಸ್ ಎಂಥ ಸುಂದರ ಪ್ರವಾಸಿ ತಾಣ ಅನ್ನೋದು ಕೊರೊನಾ ಬಳಿಕ ಎಲ್ಲರಿಗೂ ಗೊತ್ತಾಗಿದೆ. ಅದೇ ರೀತಿ ಇಲ್ಲಿ ಸುಂದರವಾದ ರೆಸ್ಟೋರೆಂಟ್‌ಗಳೂ ಇದೆ. ಅಂಥ ರೆಸ್ಟೋರೆಂಟ್‌ಗಳಲ್ಲಿ ಈಥಾ ರೆಸ್ಟೋರೆಂಟ್ ಕೂಡ ಒಂದು. ಇದರ ವಿಶೇಷತೆ ಅಂದ್ರೆ, ಇದು ಸಮುದ್ರದ ಮಧ್ಯಭಾಗದಲ್ಲಿ, ಆಳದಲ್ಲಿ ಇದೆ. ನೀವು ಇಲ್ಲಿ ತಿಂಡಿ ತಿನ್ನಲು ಬಂದಾಗ, ನಿಮಗೆ ಬೇರೆ ಲೋಕಕ್ಕೆ ಬಂದ ಅನುಭವವಾಗುತ್ತದೆ. ಇದು ಗ್ಲಾಸ್‌ನಿಂದ ಮಾಡಲ್ಪಟ್ಟಿದ್ದು, ನಿಮ್ಮ ಸುತ್ತ ಮುತ್ತಲೂ ತರಹೇವಾರಿ ಮೀನುಗಳು ಈಜಾಡುವ ದೃಶ್ಯವನ್ನು ನೀವು ಎಂಜಾಯ್ ಮಾಡಬಹುದು.
ಮೂರನೇಯ ರೆಸ್ಟೋರೆಂಟ್ ಸೆಂಟ್ರಲ್ ಜೈಲ್ ರೆಸ್ಟೋರೆಂಟ್ ಬೆಂಗಳೂರು. ಹೌದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿಯೇ ಈ ರೆಸ್ಟೋರೆಂಟ್ ಇರೋದು. ಈ ಫೇಮಸ್ ರೆಸ್ಟೋರೆಂಟನ್ನ ತಿಹಾರ್ ಜೈಲ್ ಶೈಲಿಯಲ್ಲಿಯೇ ಕಟ್ಟಲಾಗಿದೆ. ನೀವು ಈ ರೆಸ್ಟೋರೆಂಟ್‌ಗೆ ಹೋದಾಗ, ಅಲ್ಲಿ ವೇಟರ್‌ಗಳು ಖೈದಿಗಳ ಯೂನಿಫಾರ್ಮ್ ಹಾಕೊಂಡು, ಮ್ಯಾನೇಜರ್‌ಗಳು ಪೊಲೀಸ್ ಡ್ರೆಸ್ ಹಾಕೊಂಡು ನಿಮಗೆ ಜೈಲಿನ ಅನುಭವ ಕೊಡ್ತಾರೆ. ಸಪರೇಟ್ ಆಗಿ ಕೂತು ತಿನ್ನಬೇಕು ಅಂದ್ರೆ, ಕಂಬಿ ವ್ಯವಸ್ಥೆಯೂ ಮಾಡಲಾಗಿದೆ. ಇನ್ನು ಜೈಲಿನಲ್ಲಿ ಹೇಗೆ ಖೈದಿಗಳಿಗೆ ಅಲ್ಯೂಮಿನಿಯಂ ತಟ್ಟೆಯಲ್ಲಿ ಊಟ ಕೊಡಲಾಗತ್ತೋ, ಅದೇ ರೀತಿ ನಿಮಗೆ ಇಲ್ಲಿ ಅಲ್ಯೂಮಿನಿಯಂ ತಟ್ಟೆಯಲ್ಲಿ ಊಟ ನೀಡಲಾಗತ್ತೆ.
ನಾಲ್ಕನೇಯ ರೆಸ್ಟೋರೆಂಟ್, ಮಂಕಿ ರೆಸ್ಟೋರೆಂಟ್. ಈ ರೆಸ್ಟೋರೆಂಟ್ ಜಪಾನ್‌ನಲ್ಲಿದೆ. ಇದರ ವಿಶೇಷತೆ ಅಂದ್ರೆ ಇಲ್ಲಿ ಮಂಗಗಳು ಆಹಾರವನ್ನ ಸರಬರಾಜು ಮಾಡತ್ತೆ. ಇವುಗಳಿಗೆ ಆಹಾರ ನೀಡೋ ಬಗ್ಗೆ ಒಳ್ಳೆಯ ಟ್ರೇನಿಂಗ್ ಜೊತೆಗೆ, ಟಿಪ್ಸ್ ಕೂಡ ನೀಡಲಾಗತ್ತೆ. ಬಾಳೆಹಣ್ಣು, ಸೋಯಾಬಿನ್ ಸೇರಿ ಹಲವು ತಿಂಡಿಗಳನ್ನು ಇವುಗಳಿಗೆ ಟಿಪ್ಸ್ ಆಗಿ ನೀಡಲಾಗತ್ತೆ. ಈ ಮಂಗಗಳು ಯಾವುದೇ ಆಹಾರಕ್ಕೂ ಬಾಯಿ ಹಾಕದೇ, ಬಂದ ಗ್ರಾಹಕರಿಗೆ ಪ್ರೀತಿಯಿಂದ ಆಹಾರ ನೀಡುತ್ತೇ ಅನ್ನೋದೇ ಖುಷಿಯ ಸಂಗತಿ.