- Advertisement -
www.karnatakatv.net: ಬೆಂಗಳೂರು: ಜು.8: ಇನ್ನು ಮುಂದೆ ಪೊಲೀಸರ ತಪಾಸಣೆ ವೇಳೆ ಭೌತಿಕ ದಾಖಲೆಗಳ ಬದಲಾಗಿ ಡಿಜಿಟಲ್ ದಾಖಲೆಗಳನ್ನೇ ತೋರಿಸಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದರು.
ಎಲ್ಲೆಡೆ ಡಿಜಿಟಲ್ ಕ್ರಾಂತಿ ಕಾಲಿಡುತ್ತಿದ್ದುಈ ವಿಷಯದಲ್ಲಿ ಬೆಂಗಳೂರು ನಗರ ಪೊಲೀಸ್ ವಿಭಾಗವು ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲೂ ಭೌತಿಕ ದಾಖಲೆಗಳನ್ನೇ ತೆಗೆದುಕೊಂಡು ಹೋಗುವುದು ಕಿರಿಕಿರಿಯಾಗುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಡಿಜಿಟಲ್ ರೂಪದ ದಾಖಲೆಗಳನ್ನು ಪ್ರದರ್ಶಿಸಬಹುದೆಂದು ಸ್ಪಷ್ಟಪಡಿಸಿದ್ದಾರೆ.
- Advertisement -