- Advertisement -
www.karnatakatv.net: ದೆಹಲಿ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಜುಲೈ 7ರಂದು ವಿಧಿವಶರಾಗಿದ್ದಾರೆ. ತಮ್ಮ 98ನೇ ವಯಸ್ಸಿನಲ್ಲಿ ಹಸುನೀಗಿದ್ದ ನಟನಿಗೆ ಬಾಲಿವುಡ್ ಕಂಬನಿ ಮಿಡಿದಿತ್ತು. ದಿಲೀಪ್ ಕುಮಾರ್ ಸ್ವಗೃಹ ದೆಹಲಿಯ ಬಾಂದ್ರಾದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಂಸ್ಕಾರಕ್ಕೆ ಬಂದ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಸನ್ ಗ್ಲಾಸ್ ಧರಿಸಿದ್ದರು. ಅದರಲ್ಲೂ ಒಳಾಂಗಣದಲ್ಲಿ ಗ್ಲಾಸ್ ಧರಿಸಿ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಅವರನ್ನು ಮಾತನಾಡಿಸುತ್ತಿದ್ದ ವೇಳೆ ಕ್ಲಿಕ್ಕಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟ್ರೋಲಿಗರಿಗೆ ಆಹಾರವಾಗಿದೆ. ಅಂತಿಮ ದರ್ಶನದ ವೇಳೆ ಸನ್ ಗ್ಲಾಸ್ ಬೇಕಿತ್ತಾ? ಮಾಸ್ಕ್ ಕೂಡ ಧರಿಸಿಲ್ಲ, ಸ್ಟೈಲ್ ಆಗಿ ಬಂದಿದ್ದಾರೆ. ಬಾಲಿವುಡ್ನಲ್ಲಿ ಎಲ್ಲವೂ ತೋರಿಕೆ ಅಷ್ಟೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
- Advertisement -