Movie News: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಸುದ್ದಿಯಾಗುವವರು ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ. ಆದರೆ ಈ ಬಾರಿ ರಾಜಕೀಯ ವ್ಯಕ್ತಿಯೊಬ್ಬರು ವರ್ಮಾ ಬಗ್ಗೆ ಹೇಳಿಕೆ ಕೊಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ.
ವರ್ಮಾ ನಿರ್ದೇಶನದಲ್ಲಿ ವ್ಯೂಹಂ ಸಿನಿಮಾ ಮೂಡಿಬಂದಿದ್ದು, ಮುಂದಿನ ಎಲೆಕ್ಷನ್‌ಗೂ ಮುನ್ನ ಸಿನಿಮಾ ರಿಲೀಸ್ ಆಗಲಿದೆ. ಆದರೆ ಈ ಸಿನಿಮಾ ರಿಲೀಸ್ ಮಾಡಬಾರದು ಎಂದು, ಟಿಡಿಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದು ಸಿಎಂ ಜಗನ್ ಮೋಹನ್ ರೆಡ್ಡಿ ಜೀವನಾಧಾರಿತ ಸಿನಿಮಾವಾಗಿದ್ದು, ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೇ, ನಾಯ್ಡು ಜೈಲಿಗೆ ಹೋದ ಸೀನ್ ಕೂಡ ಇದರಲ್ಲಿದೆ ಎಂದು ಟಿಡಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಏಕೆಂದರೆ ಈ ಸಿನಿಮಾ ರಿಲೀಸ್ ಆದರೆ, ಅದರಿಂದ ಚಂದ್ರಬಾಬು ನಾಯ್ಡು ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದು ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ, ಟಿಡಿಪಿ ಕಾರ್ಯಕರ್ತರು ವ್ಯೂಹಂ ಸಿನಿಮಾ ರಿಲೀಸ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡುತ್ತ, ಟಿಡಿಪಿ ಮುಖಂಡ ಕೊಲಿಕಪುಡಿ ಶ್ರೀನಿವಾಸ್ ನಾಯ್ಡು ಎಂಬುವವರು, ಯಾರು ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಶಿರಚ್ಛೇದನ ಮಾಡಿ ತಂದುಕೊಡುತ್ತಾರೋ, ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಶ್ರೀನಿವಾಸ್ ರೆಡ್ಡಿ ವಿರುದ್ಧ ರಾಮ್‌ಗೋಪಾಲ್ ವರ್ಮಾ ದೂರು ನೀಡಿದ್ದು, ಎಫ್‌ಆರ್‌ಐ ದಾಖಲಿಸಲಾಗಿದೆ. ಇನ್ನು ಸಿನಿಮಾ ರಿಲೀಸ್ ಮಾಡಬಾರದು ಎಂದು ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್, ಸೆನ್ಸಾರ್ ಮಂಡಳಿಗೆ ಪತ್ರ ಬರೆದು, ಸಿನಿಮಾ ರಿಲೀಸ್ ಮಾಡದಿರಲು ಕೋರಿದ್ದಾರೆ.
ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ