ಲೋಕಸಭೆ ಚುನಾವಣೆಗೆ ಪವನ್ ಕಲ್ಯಾಣ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಡೈರೆಕ್ಟರ್ ವರ್ಮಾ

Political News: ಸಿನಿಮಾ ಕಥೆ, ಇ್ಲಲಸಲ್ಲದ ಹೇಳಿಕೆ, ಕಾಂಟ್ರೋವರ್ಸಿಯಿಂದಾನೇ ಫೇಮಸ್ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದೀಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರಂತೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ನಟ ಪವನ್ ಕಲ್ಯಾಣ್ ವಿರುದ್ಧ ಸ್ಪರ್ಧಿಸಲಿದ್ದಾರಂತೆ.

ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಪೀಠಾಪುರಂ ಎಂಬ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇವರು ಕೂಡ ಮೋದಿಯ ಬೆಂಬಲಿಗರಾಗಿದ್ದು, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಗುರಿ ಹೊಂದಿದ್ದಾರೆ. ಆದರೆ ಇವರ ವಿರುದ್ಧ ರಾಮ್‌ಗೋಪಾಲ್ ವರ್ಮಾ ಕೂಡ, ಅದೇ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದು, ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

ಪವನ್ ಕಲ್ಯಾಣ್‌ಗೆ ಯಾವ ರೇಂಜಿನ ಫ್ಯಾನ್ಸ್ ಇದ್ದಾರೋ, ಅದೇ ರೇಂಜಿನ್ ಫ್ಯಾನ್ಸ್ ನಿರ್ದೇಶಕ ರಾಮ್‌ಗೋಪಾಲ್ ವರ್ಮಾಗೂ ಇದ್ದಾರೆ. ಇಷ್ಟೇ ಅಲ್ಲದೇ, ಪವನ್ ಮತ್ತು ವರ್ಮಾ ನಡುವೆ ಸಿನಿ ಲೈಫ್‌ನಲ್ಲೂ ಸಣ್ಣ ಮಟ್ಟದ ಪೈಪೋಟಿ ಇದೆ. ಸಾಮಾನ್ಯವಾಗಿ ಚುನಾವಣೆ, ರಾಜಕೀಯ ಅಂತೆಲ್ಲ ತಲೆಕೆಡಿಸಿಕೊಳ್ಳದ ವರ್ಮಾರ ನಿರ್ಧಾರ, ಹಲವರ ಕುತೂಹಲಕ್ಕೆ ಕಾರಣವಾಗಿದೆ. ವರ್ಮಾ ನಿಜವಾಗಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ..? ಅಥವಾ ಸುಮ್ಮನೆ ಈ ರೀತಿ ಹೇಳಿದ್ದಾರಾ ಅಂತಾ ಚುನಾವಣೆ ತನಕ ಕಾದು ನೋಡಬೇಕಿದೆ.

ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

ವಾಹನ ಸವಾರರಿಗೆ ಗುಡ್‌ನ್ಯೂಸ್: ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ

About The Author