Hassan News: ಹಾಸನ: ಪೊಲೀಸ್ ಇಲಾಖೆ ಎಂದರೇ ಹೆಚ್ಚು ಶಿಸ್ತನ್ನು ಪಾಲಿಸುತ್ತಾರೆ. ಕರ್ತವ್ಯದ ವೇಳೆ ಸಾವನಪ್ಪಿದ ಹುತಾತ್ಮರಾದವರಿಗೆ ಗೌರವ ಸಲ್ಲಿಸುವುದು ನಮ್ಮ ಆಧ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಾಸನ ಜಿಲ್ಲಾ ಪೊಲೀಸ್ ನಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದ ವೇಳೆ ಹುತತ್ಮರಾದವರಿಗೆ ಗೌರವ ಸಲ್ಲಿಸಲಾಗುತ್ತಿದ್ದು, ಅವರ ಆತ್ಮಗಳಿಗೆ ಶಾಂತಿ ದೊರಕಿ ನೆಮ್ಮದಿ ಸಿಗಲೆಂದು ಪ್ರಾರ್ಥಿಸುತ್ತೇವೆ. ಕರ್ತವ್ಯ ನಿರ್ವಹಿಸುವಾಗ ಜೀವವನ್ನ ಲೆಕ್ಕಿಸದೇ ಸಮರ್ಪಣೆ ಮಾಡುವುದೆಂದರೇ ಅದು ಸಣ್ಣ ಮಾತಲ್ಲ. ಅವರ ಕುಟುಂಬಗಳಿಗೆ ಒಳ್ಳೆಯದಾಗಲಿ. ಪೊಲೀಸ್ ಇಲಾಖೆ ಎಂದರೇ ಹೆಚ್ಚೆಚ್ಚು ಶಿಸ್ತನ್ನು ಪಾಲಿಸುತ್ತಾರೆ ಎಂದರು.
೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ಮಾತನಾಡಿ, ೨೦, ೧೦, ೧೯೫೯ ರಲ್ಲಿ ಮೂರು ಬೆಟಾಲಿಯನ್ ಚೈನಾ ಮತ್ತು ಭಾರತದ ಗಡಿಯಲ್ಲಿ ಹೋಗಿ ಎರಡು ಬೆಟಾಲಿಯನ್ ವಾಪಸ್ ಬಂದರೇ ಒಂದು ಬೆಟಾಲಿಯನ್ ವಾಪಸ್ ಬರುವುದಿಲ್ಲ. ಅವರನ್ನು ಹುಡುಕುವುದಕ್ಕೆ ಹೋದಾಗ ಸಿಗುವುದಿಲ್ಲ. ಗಡಿಯಲ್ಲಿ ಸುಮಾರು ೧೦ ಜನರು ಚೈನ ದಾಳಿಗೆ ಸಾವನಪ್ಪಿರುತ್ತಾರೆ. ಒಂದು ತಿಂಗಳ ನಂತರ ಆ ಶವವನ್ನು ವಾಪಸ್ ಕೊಡುತ್ತಾರೆ. ಈ ನಿಟ್ಟಿನಲ್ಲಿ ಆ ದಿನವನ್ನು ಪೊಲೀಸ್ ಹುತಾತ್ಮ ದಿನವನನ್ನಾಗಿ ಆಚರಿಸಲಾಗುತ್ತಿದೆ ಎಂದರು. ಎಲ್ಲರೂ ಕರ್ತವ್ಯ ಮಾಡುವುದು ನಿಜ. ಕರ್ತವ್ಯದ ವೇಳೆ ಜೀವ ಕಳೆದುಕೊಂಡಂತಹ ಆ ಕುಟುಂಬದ ಸ್ಥಿತಿ ಹೇಳುವುದಕ್ಕಾಗುವುದಿಲ್ಲ. ಅವರಿಗೆ ದೈರ್ಯ ತುಂಬುವ ಕೆಲಸವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಎಂ.ಎಸ್. ಮಾತನಾಡಿ, ಕರ್ತವ್ಯದ ವೇಳೆ ಯಾರಾರು ಪ್ರಾಣವನ್ನು ಕಳೆದುಕೊಂಡಿರುತ್ತಾರೆ ಅವರಿಗೆ ಪ್ರತಿ ವರ್ಷ ಪೊಲೀಸ್ ಹುತಾತ್ಮ ದಿನವೆಂದು ಕಾರ್ಯಕ್ರಮವನ್ನು ಆಯೋಜಿಸಿ ಗೌರವ ಸಲ್ಲಿಸಲಾಗುತ್ತಿದೆ. ಕಳೆದ ವರ್ಷ ೨೦೨೨ ಸೆಪ್ಟಂಬರ್ ೧ ರಿಂದ ೨೦೨೩ ಆಗಸ್ಟ್ ೩೧ರ ವರೆಗೂ ೧೮೧ ಜನ ಪೊಲೀಸರು ತಮ್ಮ ಪ್ರಾಣವನ್ನು ಕಳೆದುಕೊಂಡಿರುತ್ತಾರೆ. ಪ್ಯಾರ ಮಿಲ್ಟ್ರಿ ಪೋರ್ಸ್ ಮೀಸಲು ಪಡೆಯ ೧೯ ಜನರು, ಬಿ.ಎಸ್.ಎಫ್. ನಿಂದ ೭೨ ಜನ, ಆರ್.ಪಿ.ಎಫ್. ನಿಂದ ೧೩ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ನಮ್ಮ ರಾಜ್ಯದಲ್ಲಿ ೧೬ ಜನ ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ ಎಂದು ಸಾವನಪ್ಪಿದ ಪೊಲೀಸ್ ಸಿಬ್ಬಂದಿಗಳ ಹೆಸರನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಮೊದಲು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಣೆ ಸಲ್ಲಿಸಿದರು. ಸ್ಮರಣಾರ್ಥ ಮೂರು ಬಾರಿ ಗುಂಡು ಹಾರಿಸಿದರು. ಇದಾದ ಮೇಲೆ ಹುತಾತ್ಮರ ಪಟ್ಟಿ ಓದಲಾಯಿತು. ಕೊನೆಯಲ್ಲಿ ಎರಡು ನಿಮಿಷ ಮೌನ ಆಚರಿಸಿದರು.
ಇದೆ ವೇಳೆ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಎಂ.ಕೆ. ತಮ್ಮಯ್ಯ ಇತರರು ಉಪಸ್ಥಿತರಿದ್ದರು.
ದೋಷಯುಕ್ತ ಇವಿ ವಾಹನ ಹೊಸ ಬೈಕ್ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ
ಮಾದರಿಯಾದ ಸಚಿವ ಸಂತೋಷ್ ಲಾಡ್ ನಡೆ: ಹೊಸ ಸರ್ಕಾರಿ ಕಾರು ಬೇಡ ಎಂದ ಮಂತ್ರಿ




