ಕೋಲಾರ : ಕೋಲಾರ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಮೋಹನ್ ಕೃಷ್ಣ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಮೋಹನ್ ಕೃಷ್ಣ ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು, ಪಕ್ಷ ಸಂಘಟನೆ ಮಾಡಿದ್ದಾರೆ. ಆದರೆ ವೇಲು ನಾಯ್ಕರ್ ಇತ್ತೀಚೆಗೆ ಬಂದಿದ್ದು, ರಾಜ್ಯದ ಬಿಜೆಪಿ ಉಸ್ತುವಾರಿ ಸಚಿವ ಮುನಿರತ್ನ ಕೂಡ ವೇಲು ನಾಯ್ಕರ್‌ಗೆ ಬೆಂಬಲ ನೀಡಿ, ಪ್ರಚಾರಕ್ಕಾಗಿ ಕೋಲಾರಕ್ಕೆ ಬಂದಿದ್ದರು. ಈ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮೋಹನ್ ಕೃಷ್ಣ ಬೆಂಬಲಿಗರು, ಗೋ ಬ್ಯಾಕ್ ವೇಲು ನಾಯ್ಕರ್ ಎಂದು ಪ್ರತಿಭಟಿಸಿದ್ದಾರೆ.
ಮೋಹನ್ ಕೃಷ್ಣ ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದರು. ಈ ಕಾರಣಕ್ಕಾಗಿ ತನಗೇ ಬಿಜೆಪಿ ಟಿಕೇಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಈಗ ಏಕಾಏಕಿ ಕೋಲಾರಕ್ಕೆ ಬಂದ ವೇಲು ನಾಯ್ಕರ್ ಪ್ರಚಾರ ಶುರುಹಚ್ಚಿಕೊಂಡಿದ್ದಾರೆ. ಹಾಗಾಗಿ ಕೃಷ್ಣ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ವೇಲು ನಾಯ್ಕರ್ ಎಂಬ ಅಭಿಯಾನ ಶುರು ಮಾಡಿದ್ದಾರೆ.
ಯಾವ ಮಾನದಂಡದಲ್ಲಿ ಟಿಕೆಟ್ ನೀಡ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿ, ಕೆಜಿಎಫ್ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಮೋಹನ್ ಕೃಷ್ಣ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.
‘ಬಹುಶಃ ಜೆಡಿಎಸ್ ಪಕ್ಷಕ್ಕೆ ಏನಾದ್ರೂ ಆ ಶಾಪ ತಟ್ಟಿದೆಯೆನೋ ಗೊತ್ತಿಲ್ಲ’
ರಾಧಾಕೃಷ್ಣ ಮನೆಗೆ ರವಿಕುಮಾರ್ ಭೇಟಿ: ಬೆಂಬಲಿಗರಿಂದ ಹೈಡ್ರಾಮಾ, ಪೊಲೀಸರಿಂದ ಪರಿಸ್ಥಿತಿ ನಿಯಂತ್ರಣ
ಮಂಡ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ, ರಾಧಾಕೃಷ್ಣಗೆ ಟಿಕೇಟ್ ಕೊಡುವಂತೆ ಒತ್ತಾಯ..