Wednesday, June 19, 2024

Latest Posts

ನಗರಸಭೆಯ ಸಾಮಾನ್ಯ ಸಭೆಗೆ ಪ್ರಾರಂಭದಲ್ಲೇ ವಿಘ್ನ..

- Advertisement -

ಹಾಸನ: ಕಳೆದ 8 ತಿಂಗಳ ನಂತರ ನಡೆಯುತ್ತಿರುವ ನಗರಸಭೆಯ ಸಾಮಾನ್ಯ ಸಭೆಯ ವಿಚಾರಗಳು ಪ್ರಸ್ತಾಪವಾಗುವ ಮೊದಲೇ ವಿಘ್ನ ಎಂಬಂತೆ ಸ್ಥಾಯಿ ಸಮಿತಿ ರಚನೆ ಮಾಡುವಂತೆ ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿದಲ್ಲದೇ ಕಾಟಚಾರದ ಸಭೆ ಎಂದು ದೂರಿದಲ್ಲದೇ ಇತರೆ ವಿಚಾರಗಳನ್ನಿಟ್ಟಿಕೊಂಡು ಸಭೆಯು ವಾಗ್ವಾದದಲ್ಲೆ ಕೆಲ ಗಂಟೆಗಳ ಕಾಲ ಕಳೆಯಲಾಯಿತು.

ಸಂತೇಪೇಟೆ ವೃತ್ತದ ಬಳಿ ಇರುವ ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಗುರುವಾರದಂದು ಬೆಳಿಗ್ಗೆ 11:3೦ಕ್ಕೆ ಕರೆಯಲಾಗಿದ್ದ ನಗರಸಭೆಯ ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷರಾದ ಆರ್. ಮೋಹನ್ ಅಧ್ಯಕ್ಷತೆಯಲ್ಲಿ ಜರುಗಿತು. ಕಳೆದ ಸಾರಿ ನಡೆದ ಜನರಲ್ ಬಾಡಿ ಮೀಟಿಂಗ್ ಸಭೆಯ ವಿಚಾರಗಳನ್ನು ಈ ಸಭೆಗೆ ಏಕೆ ಸೇರಿಸಿರುವುದಿಲ್ಲ. ಇದು ಕಾಟಚಾರದ ಸಭೆ ಎಂಬಂತೆ ಕಾಣುತ್ತಿದೆ ಎಂದು ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ ಗಮನಸೆಳೆದಲ್ಲದೇ ಸ್ಥಾಯಿ ಸಮಿತಿ ರಚನೆ ಮಾಡಬೇಕೆಂದು ಒತ್ತಾಯಿಸಿದ ಅವರು, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವವರೆಗೂ ಸಭೆಯಲ್ಲಿ ಯಾವ ವಿಚಾರವು ಪ್ರಸ್ತಾಪ ಮಾಡುವುದು ಬೇಡ ಎಂದು ತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷರಾದ ಆರ್. ಮೋಹನ್ ಅವರು, ನಗರದಲ್ಲಿ ಅನೇಕ ಸಮಸ್ಯೆಗಳಿರುವಾಗ ಸ್ಥಾಯಿ ಸಮಿತಿ ರಚನೆ ಬಗ್ಗೆ ಮಾತನಾಡುತ್ತಿದ್ದೀರಾ ಎಂದರು.

‘ತಿನ್ನಲ್ಲ, ತಿನ್ನೋಕ್ಕೂ ಬಿಡಲ್ಲ ಎಂದಿದ್ರಿ, ಹಾಗಾದ್ರೆ ಈಗ ನಿಮ್ಮವರೇನು ತಿನ್ನುತ್ತಿದ್ದಾರೆ’..?

ಗಿರೀಶ್ ಚನ್ನವೀರಪ್ಪ ಮತ್ತು ಅಕ್ಬರ್, ಸಿ.ಆರ್. ಶಂಕರ್ ಸೇರಿದಂತೆ ಜೆಡಿಎಸ್ ಸದಸ್ಯರು ಮಾತನಾಡಿ, ಸ್ಥಾಯಿ ಸಮಿತಿ ರಚಿಸಬೇಕು ಎಂಬ ವಿಚಾರಕ್ಕೆ ಎಂದಿನಂತೆ ಸದ್ದು ಗದ್ದಲದೊಂದಿಗೆ ನಡೆದ ಸಾಮಾನ್ಯ ಸಭೆ ಶೀಘ್ರ ಸ್ಥಾಯಿ ಸಮಿತಿ ರಚನೆ – ಪ್ರತಿ ತಿಂಗಳು ಸಾಮಾನ್ಯ ಸಭೆ ಕರೆಯಬೇಕು.​ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳಿಗೆ ಕೆಲ ತಿಂಗಳ ಹಿಂದೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಸೂಚಿಸಿ ಪ್ರತಿ ತಿಂಗಳು ಸಾಮಾನ್ಯ ಸಭೆ ಕರೆಯಬೇಕು ಪುರಸಭೆ ಅಧಿನಿಯಮದಂತೆ ಕಾರ್ಯಕಲಾಪದಡಿ ಕಾರ್ಯ ನಿರ್ವಹಿಸುವಂತೆ

ಮತ್ತು ಅಧ್ಯಕ್ಷರಿಗೆ ಈ ಸಂಬಂಧ ಕಾನೂನಿನ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಡಿಸಿ ಪತ್ರ ಬರೆದು ಹಲವು ತಿಂಗಳು ಕಳೆದರು ಆಯುಕ್ತರಾಗಲಿ ಅಧ್ಯಕ್ಷರಾಗಲಿ ಇದುವರೆಗೂ ಸೂಕ್ತ ನಿರ್ಧಾರ ಕೈಗೊಂಡಿರುವುದಿಲ್ಲ. 8 ತಿಂಗಳ ನಂತರ ಸಾಮಾನ್ಯ ಸಭೆ ಕರೆದಿದ್ದು, ಸ್ಥಾಯಿ ಸಮಿತಿ ರಚನೆ ಸಂಬಂಧ ಯಾವುದೇ ವಿಷಯವನ್ನು ಈ ಬಾರಿಯ ಸಭೆಯಲ್ಲಿನ ವಿಷಯಗಳಲ್ಲಿ ಪ್ರಸ್ತಾಪಿಸುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಇತರೆ ಸದಸ್ಯರು ಸ್ಥಾಯಿ ಸಮಿತಿ ರಚಿಸಬೇಕು ಹಾಗೂ ಮಾರ್ಚ್ ೩೦ ರಂದು ಗೊರೂರು ಪ್ರವಾಸಿ ಮಂದಿರದಲ್ಲಿ ನಡೆದಂತಹ ನಗರ ಸಭೆಯ ಅಯ್ಯವ್ಯಯ ಮಂಡನೆ ವಿಚಾರವಾಗಿ ಸೂಕ್ತ ಮಾಹಿತಿ ಒದಗಿಸಬೇಕು ಎಂದು ಪಟ್ಟು ಹಿಡಿದರು. ಮಾರ್ಚ್ನಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸದ ವಿಷಯಗಳಿಗೆ ಒಪ್ಪಿಗೆ ದೊರೆತಿದೆ ಎಂದು ನಡವಳಿ ಪುಸ್ತಕದಲ್ಲಿ ನಮೂದಿಸಲಾಗಿದೆ ಇದಕ್ಕೆ ಅಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

2ನೇ ಮದುವೆಲಿ ತಾಳಿ ಕಟ್ಟಿ ಸಿಕ್ಕಿಬಿದ್ದು ಪೊಲೀಸ್ ಅತಿಥಿಯಾದ ಯೋಧ..

ಸ್ಥಾಯಿ ಸಮಿತಿ ರಚನೆ ಸಂಬಂಧ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಮೋಹನ್ ಅವರು ಮುಂದಿನ ಒಂದು ತಿಂಗಳಲ್ಲಿ ಸಾಮಾನ್ಯ ಸಭೆ ಕರೆದು ಸ್ಥಾಯಿ ಸಮಿತಿ ರಚನೆ ಸಂಬಂಧ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜೆಡಿಎಸ್ ಸದಸ್ಯರು ಪ್ರಶ್ನೆ ಕೇಳುವಾಗ ಬಿಜೆಪಿ ಸದಸ್ಯರಾದ ಸಂತೋಷ್ ಅವರು ಮಧ್ಯೆ ಮಾತನಾಡಲು ಮುಂದಾದಗ ಇತರೆ ಸದಸ್ಯರು ನಮ್ಮ ಮಾತು ಮುಗಿದ ಮೇಲೆ ಮಾತನಾಡುವಂತೆ ಹೇಳಿ ಸುಮ್ಮನಾಗಿಸಿದರು. ಎಷ್ಟೊ ಹೊತತಾದ ಮೇಲೆ ಕೆಲ ವಿಚಾರಗಳನ್ನು ಇದೆ ವೇಳೆ ಪ್ರಸ್ತಾಪಿಸಲಾಯಿತು.

​ ​ ​ ​ ​ ನಗರಸಭೆಯ ಸಾಮಾನ್ಯ ನಡೆಯುವ ಮೊದಲು ಇತ್ತಿಚಿಗೆ ಮಡಿದ 16ನೇ ವಾರ್ಡಿನ ನಗರಸಭೆ ಸದಸ್ಯರಾದ ಪ್ರಶಾಂತ್ ನಾಗರಾಜ್ ಅವರಿಗೆ ಹಾಗೂ ಇತರರು ಮಡಿದವರಿಗೆ ಇದೆ ವೇಳೆ ಎರಡು ನಿಮಿಷ ಮೌನ ಆಚರಿಸಿ ಗೌರವ ಸೂಚಿಸಿದರು. 16ನೇ ವಾರ್ಡಿಗೆ ನಡೆದ ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನವೀನ್ ನಾಗರಾಜು ಅವರನ್ನು ನಗರಸಭೆ ಅಧ್ಯಕ್ಷರು, ಆಯುಕ್ತರು ಹಾಗೂ ಸದಸ್ಯರೆಲ್ಲಾ ಸೇರಿ ಸನ್ಮಾನಿಸಿ ಗೌರವಿಸಿದರು. ನಗರಸಭೆಗೆ ಹೊಸದಾಗಿ ಬಂದಿರುವ ಇತರೆ ತಾಲೂಕಿನ ಮೂವರನ್ನು ಸ್ವಾಗತ ಮಾಡಿದಲ್ಲದೇ ಪರಿಚಯ ಮಾಡಿಕೊಂಡರು. ಇದೆ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಮಂಗಳಾ, ಇಂಜಿನಿಯರ್ ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss