ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಗಣಿಗ ರವಿಕುಮಾರ್‌ಗೆ ಟಿಕೇಟ್ ನೀಡಿದ ಹಿನ್ನೆಲೆ, ಕೀಲಾರ ರಾಧಾಕೃಷ್ಣ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ.
ಹಾಗಾಗಿ ಮಂಡ್ಯದ ಬಂದೀಗೌಡ ಬಟಾವಣೆಯಲ್ಲಿರುವ ರಾಧಾಕೃಷ್ಣರ ಮನೆಯ ಬಳಿ ಬೆಂಬಲಿಗರು ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರ ಬೆಂಬಲಿಗರು, ರಾಧಾಕೃಷ್ಣಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಪಕ್ಷ ಸಂಘಟನೆಯಲ್ಲಿ ರಾಧಾಕೃಷ್ಣ ಪಾತ್ರ ದೊಡ್ಡದಿದೆ. ಟಿಕೆಟ್ ಕೊಡುವ ಭರವಸೆ ಕೊಟ್ಟು ಮಾತು ತಪ್ಪಿದ್ದಾರೆ. ತತಕ್ಷಣ ಅಭ್ಯರ್ಥಿ ಬದಲಿಸಿ ರಾಧಾಕೃಷ್ಣಗೆ ಬಿ ಫಾರಂ ನೀಡುವಂತೆ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.
ನಿನ್ನೆ ಕಾಂಗ್ರೆಸ್ 2ನೇಯ ಪಟ್ಟಿ ಬಿಡುಗಡೆಯಾಗಿದ್ದು, ರಾಧಾಕೃಷ್ಣರಿಗೆ ಟಿಕೇಟ್ ಸಿಕ್ಕಿಲ್ಲವೆಂದು, ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ, ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಅಭ್ಯರ್ಥಿಯನ್ನು ಬದಲಿಸುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.
‘ಬಹುಶಃ ಜೆಡಿಎಸ್ ಪಕ್ಷಕ್ಕೆ ಏನಾದ್ರೂ ಆ ಶಾಪ ತಟ್ಟಿದೆಯೆನೋ ಗೊತ್ತಿಲ್ಲ’
‘ಹಳೇ ರೈಲಿಗೆ ಹೊಸ ಇಂಜಿನ್ ಅಳವಡಿಸಿ ಬಾವುಟ ಹಾರಿಸಲು ಮೋದಿಯೇ ಬೇಕೆ..?’