Saturday, July 12, 2025

Latest Posts

ಸಂವಿಧಾನ ಜಾಗೃತಿ ವಾಕಾಥಾನ್‌ಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಚಾಲನೆ

- Advertisement -

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮನ ಸರ್ಕಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ವಾಕ್ ಥಾನ್‌ಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆ‌ರ್.ಜೆ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಮ್ಮ ಸಂವಿಧಾನ ನಮ್ಮ ಹೆಮ್ಮೆ, ನಮ್ಮ ಸಂವಿಧಾನ ನಮ್ಮ ಶಕ್ತಿ, ನಮ್ಮ ಸಂವಿಧಾನ ನಮ್ಮ ಆತ್ಮ, ನಮ್ಮ ಸಂವಿಧಾನ ನಮ್ಮ ಪ್ರತಿಷ್ಠೆ, ನಮ್ಮ ಸಂವಿಧಾನ ನಮ್ಮ ಅಭಿವೃದ್ಧಿ ಸೇರಿದಂತೆ ಮುಂತಾದ ಘೋಷಣೆಗಳನ್ನು ವಾಕ್ ಥಾನ್‌ನಲ್ಲಿ ಪಾಲ್ಗೊಂಡವರು ಕೂಗಿದರು. ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ದಿಂದ ಅಂಬೇಡ್ಕ‌ರ್ ಸರ್ಕಲ್ (ಪಿಂಟೊ) ವರೆಗೆ (ಕಾಲ್ನಡಿಗೆ ಜಾಥಾ) ವಾಕಾಥಾನ್ ಸಾಗಿತು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಅಲ್ಲಾಭಕ್ಷ ಎಂ.ಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಮಾಜಿ ದೇವದಾಸಿಯರು, ಮಹಿಳಾ ಕಾರ್ಯಕರ್ತೆಯರು, ಸಾರ್ವಜನಿಕರು ಸಂವಿಧಾನ ಜಾಗೃತಿ ವಾಕ್ ಥಾನ್ ನಲ್ಲಿ ಭಾಗವಹಿಸಿದ್ದರು

ರಾಕ್ ಲೈನ್ ವಿರುದ್ಧ “ದೊಡ್ಡ” ಷಡ್ಯಂತ್ರ..?

ಬಡವರು ಬಡವರಾಗಿ ಉಳಿಯುವುದಕ್ಕೆ ಕಾರಣಕರ್ತರೇ ಕಾಂಗ್ರೆಸ್‌ನವರು: ಬಿ.ವೈ.ವಿಜಯೇಂದ್ರ

ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಸತ್ಯವನ್ನು ಹುದುಗಿಸಿಡಲು ಯತ್ನಿಸುತ್ತದೆ: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss