Dharwad News: ಇಂದು ಶಾಲಾ ಪ್ರಾರಂಭೋತ್ಸವ ದಿನ. ಈ ದಿನ ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಮಕ್ಕಳನ್ನು ವಿಶೇಷವಾಗಿ ಶಾಲೆಗೆ ಬರ ಮಾಡಿಕೊಂಡಿದ್ದಾರೆ.
ಶಾಲಾ ಮಕ್ಕಳ ಮೇಲೆ ಪುಷ್ಪಗಳನ್ನು ಹಾಕಿ ಚಾಕ್‌ಲೇಟ್ ಕೊಡುವ ಮುಖಾಂತರ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಂಡರು ಆನಂತರ ಸ್ವತಃ ಶಿಕ್ಷಕಿಯಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ಎಂಟನೇ ತರಗತಿಯ ಇಂಗ್ಲೀಷ್ ಪಾಠವನ್ನು ಬೋಧನೆ ಮಾಡುವ ಮೂಲಕ ಮಕ್ಕಳ ಗಮನಸೆಳೆದರು.
ಮಕ್ಕಳಿಗೆ ಯಾವ ಭಾಷೆ ಕಠಿಣ ಎನಿಸುತ್ತದೆ ಎಂದು ಕೇಳಿದಾಗ, ಇಂಗ್ಲೀಷ್ ಭಾಷೆ ಕಠಿಣವಾಗುತ್ತದೆ ಎಂದು ಮಕ್ಕಳು ಹೇಳಿದಾಗ ಅದೇ ಭಾಷೆ ಮೇಲೆ ಪಾಠ ಮಾಡಿದ ಜಿಲ್ಲಾಧಿಕಾರಿಗಳು, ಇಂಗ್ಲೀಷ್ ಭಾಷೆಯನ್ನು ಕೇವಲ ಒಂದು ವಿಷಯವಾಗಿ ನೋಡಬೇಕು. ಯಾವುದೇ ಭಾಷೆಯಾಗಲಿ ಅದು ತಪ್ಪಾದರೂ ಮಾತನಾಡಲು ಕಲಿಯಬೇಕು ಎಂದು ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಡಿದ ಪಾಠವನ್ನು ಮಕ್ಕಳು ಕೂಡ ಆಸಕ್ತಿಯಿಂದ ಕೇಳಿದ್ದು ವಿಶೇಷವಾಗಿತ್ತು. ಪಾಠದ ನಂತರ ಮಕ್ಕಳಿಗೆ ಪ್ರಶ್ನೆಗಳನ್ನೂ ಕೇಳಿದ ಜಿಲ್ಲಾಧಿಕಾರಿಗಳು, ಸದ್ಯ ಆರಂಭವಾಗಿರುವ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಿಂಹ ಘರ್ಜನೆ ಮಾಡುತ್ತಿರುವ ನೂತನ ಡಿ.ಸಿ.ಪಿ.ಕುಶಾಲ್ ಚೌಕ್ಸೆ
ಜೂನ್ 2ರಿಂದ ಜೂನ್ 5ರವರೆಗೆ ಕೃ.ವಿ.ವಿ ಮತ ಎಣಿಕೆ ಕೇಂದ್ರದ ಸುತ್ತ ಪ್ರತಿಬಂಧಕಾಜ್ಞೆ ಜಾರಿ