ಹಾಸನ: ಭಾರೀ ಕುತುಹಲ ಕೆರಳಿಸಿರುವ ಏಳು ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶಕ್ಕಾಗಿ ಜನತೆ ಕಾಯುತ್ತಿದ್ದು, ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಮತ ಏಣಿಕೆಯನ್ನು ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.
ನಗರದ ಡೈರಿ ವೃತ್ತ, ರಿಂಗ್ ರಸ್ತೆ ಬಳಿ ಇರುವ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವಣದಲ್ಲಿ ಮತ ಏಣಿಕೆ ನಡೆಸಲಾಗುವುದು ಜಾಗವನ್ನು ಪರಿಶೀಲಿಸಿ ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ವಿಧಾನಸಭೆ ಚುನಾವಣೆ ಮುಗಿದು ಮತ ಏಣಿಕೆ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮಲ್ಲಿ 11 ಸ್ಟ್ರಾಂಗ್ ರೂಮ್ ಹಾಗೂ ಏಳು ಕ್ಷೇತ್ರಕ್ಕೂ ಕೌಂಟಿಂಗ್ ಹಾಲ್ ಸಿದ್ಧಪಡಿಸಲಾಗಿದ್ದು, ಒಂದೊಂದು ಕೌಟಿಂಗ್ ರೂಂನಲ್ಲಿ 14 ಟೇಬಲ್ ಇಡಲಾಗಿದ್ದು, ಪೋಸ್ಟಲ್ ಮತ ಏಣಿಕೆಗೆ ಒಂದೊಂದು ರೂಂನಲ್ಲಿ ಎರಡೆರಡು ಟೇಬಲ್ ಇಡಲಾಗಿದೆ.
ಮೊದಲು ಪೋಸ್ಟಲ್ ಮತಗಳ ಏಣಿಕೆ ಪ್ರಕ್ರಿಯೆ ಪ್ರಾರಂಭಿಸಿದ 15 ನಿಮಿಷದ ನಂತರ ಮತಯಂತ್ರಗಳಲ್ಲಿರುವ ಮತಗಳ ಏಣಿಕೆ ಆರಂಭಿಸಲಾಗುವುದು. ಶನಿವಾರದಂದು ಮದ್ಯಾಹ್ನ 12 ಗಂಟೆ ಒಳಗೆ ಎಲ್ಲಾ ಏಣಿಕೆ ಪ್ರಕ್ರಿಯೇ ಮುಗಿಸುವ ಗುರಿ ಹೊಂದಿದ್ದೇವೆ. ಪೋಸ್ಟಲ್ ಮತಗಳ ಏಣಿಕೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಪ್ರತಿ ಏಣಿಕೆಯಲ್ಲೂ ಎರಡನೇ ಬಾರಿಗೆ ಅಬ್ಸವರ್ ಅವರ ಟೇಬಲ್ ನಲ್ಲಿ ಏಣಿಕೆಯಾದ ನಂತರ ರೌಡ್ ಫೈನಲ್ ಎಂದು ನಿರ್ಧರಿಸಲಾಗುತ್ತದೆ. ಮತ ಏಣಿಕೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಒಟ್ಟು ೮೦೦ ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಇಡೀ ಜಿಲ್ಲೆಗೆ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೂ 144 ಸೆಕ್ಷೆನ್ ಜಾರಿ ಮಾಡಲಾಗಿದ್ದು, ಮತ ಏಣಿಕೆ ದಿವಸದಂದು ಯಾವುದೇ ಮೆರವಣಿಗೆ ಆಗಲಿ, ಪಟಾಕಿ ಸಿಡಿಸಿ ಸಂಭ್ರಮಿಸುವಾಗಿಲ್ಲ. ಮತ ಏಣಿಕೆ ಟೇಬಲ್ ಗೆ ಮೂವರನ್ನು ನೇಮಕ ಮಾಡಲಾಗಿದೆ. ಒಟ್ಟಾಗಿ ಮತ ಏಣಿಕೆ ವೇಳೆ 600 ಜನ ಸಿಬ್ಬಂದಿಗಳು ಕೆಲಸ ನಿರ್ವಹಿಸಲಿದ್ದಾರೆ. ಶನಿವಾರದಂದು ಬೆಳಿಗ್ಗೆ 7ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಮಾಡಿ 8 ಗಂಟೆಗೆ ಮತ ಏಣಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿಧಾನಸಭಾ ಚುನಾವಣೆಯ ಮತ ಏಣಿಕೆ ನಡೆಯುವ ಹಿನ್ನಲೆಯಲ್ಲಿ ಮೆ ಏಣಿಕೆ ಕೇಂದ್ರವಾದ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸುತ್ತ ಮುತ್ತ ಬಾರಿ ಪೊಲೀಸ್ ಬಿಗಿ ಬಂದು ಬಸ್ತ್ ಮಾಡಲಾಗಿದ್ದು, ರಿಂಗ್ ರಸ್ತೆ ಉದ್ದಕ್ಕೂ ಬ್ಯಾರಿ ಕೇಡ್ ಅಳವಡಿಸಲಾಗಿದೆ. ಈ ಜಾಗದಲ್ಲಿ ಗುಂಪು ಗುಂಪಾಗಿ ಓಡಾಡಲು ನಿಷೇಧ ಮಾಡಲಾಗಿದೆ.
ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ ಕೆಚಪ್, ಸಲಾಡ್, ನವಿಲು ಕಳ್ಳತನ ಮಾಡಿದ ಇಮ್ರಾನ್ ಬೆಂಬಲಿಗರು..
ಖುಷಿಯಿಂದ ಡಾನ್ಸ್ ಮಾಡುತ್ತಲೇ, ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ: ವೀಡಿಯೋ ವೈರಲ್
ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್