Bollywood News: ಹಿಂದಿ ಬಿಗ್‌ಬಾಸ್‌ನಲ್ಲಿ ಪತಿ-ಪತ್ನಿ ಡಿವೋರ್ಸ್ ಬಗ್ಗೆ ಮಾತನಾಡಿಕೊಂಡು, ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಕಿರುತೆರೆ ತಾರಾ ದಂಪತಿಯಾಗಿರುವ ವಿಕಿ ಜೈನ್ ಮತ್ತು ಅಂಕಿತಾ ಲೋಖಂಡೆ, ಈ ಬಾರಿ ಹಿಂದಿ ಬಿಗ್‌ಬಾಸ್‌ಗೆ ಸ್ಪರ್ಧಿಗಳಾಗಿ ಬಂದಿದ್ದಾರೆ. ಆದರೆ ಇವರಿಬ್ಬರು ಇರುವ ರೀತಿ ನೋಡಿದರೆ, ಇವರು ಯಾವ ಆ್ಯಂಗಲ್‌ನಿಂದಾನೂ ಗಂಡ ಹೆಂಡತಿ ಅಂತಾ ಅನ್ನಿಸೋದೇ ಇಲ್ಲ. ಯಾಕಂದ್ರೆ ಟಾಸ್ಕ್ ಮಾಡುವಾಗ, ಮಾತನಾಡುತ್ತ ಕುಳಿತಿರುವಾಗಲೂ ಜಗಳ ಆಡುತ್ತಲೇ ಇರುತ್ತಾರೆ. ಹಾಗಾಗಿ ನೆಟ್ಟಿಗರು ಅಂಕಿತಾ ಮತ್ತು ವಿಕಿ ಮಧ್ಯೆ ಸರಿಯಾಗಿ ಸಂಸಾರ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಅಲ್ಲದೇ, ಅಂಕಿತಾ ಅಭಿಮಾನಿಗಳ ಪ್ರಕಾರ, ವಿಕಿ ಅವಳಿಗೆ ತಕ್ಕ ಗಂಡನೇ ಅಲ್ಲ. ಅವನ ಬಳಿ ಬರೀ ಹಣವಿದೆ. ಆದರೆ ಅವನು ಅಂಕಿತಾಗೆ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ ಎಂದಿದ್ದಾರೆ. ಇದರಂತೆ, ಬಿಗ್‌ಬಾಸ್ ವೇದಿಕೆಯಲ್ಲಿ ದಾಂಪತ್‌ಯದ ಬಗ್ಗೆ ಮಾತನಾಡುವ ಸಮಯದಲ್ಲಿ, ವಿಕಿ ದಾಂಪತ್ಯದಲ್ಲಾಗುವ ಕಷ್ಚಗಳ ಬಗ್ಗೆ ಮಾತನಾಡಿದ್ದಾನೆ. ಆಗ ಅಂಕಿತಾ, ನಿನಗೆ ನನ್ನೊಂದಿಗೆ ಜೀವನ ಮಾಡಲು ಅಷ್ಟು ಕಷ್ಟವಾದರೆ, ಡಿವೋರ್ಸ್ ಕೊಡು ಎಂದಿದ್ದಾಳೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಇವರಿಬ್ಬರು ಶಾಕ್ ನೀಡಿದ್ದಾರೆ.
ಅಂಕಿತಾ ತಾನು ಗರ್ಭಿಣಿಯಾಗಿದ್ದೇನೆ. ನನ್ನನ್ನು ಮನೆಗೆ ಕಳಿಸಿಕೊಡಿ ಎಂದು ಕೇಳಿಕೊಂಡಿದ್ದರು. ಆದರೂ ಕೂಡ ಇನ್ನೂ ಅವರು ಮನೆಯಿಂದ ಹೊರಹೋಗಿಲ್ಲ. ಅಂಕಿತಾ ಈ ಮೊದಲು, ದಿವಂಗತ, ಬಾಲಿವುಡ್ ನಟ, ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಬ್ರೇಕಪ್ ಮಾಡಿಕೊಂಡು, ವಿಕಿ ಜೈನ್‌ನನ್ನು ಪ್ರೀತಿಸಿ, ಮದುವೆಯಾದರು. ಇದೀಗ ಇಬ್ಬರ ಮಧ್ಯೆ ಕಿರಿಕ್ ಶುರುವಾಗಿದೆ.
ಡಿಸಿಎಂ ಡಿಕೆಶಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಇಟ್ಟ ಬೇಡಿಕೆಗಳಿವು..