Wednesday, June 12, 2024

Latest Posts

ಕಾಂಗ್ರೆಸ್ ‘ಪದ್ಮಾವತಿ’ ಟ್ವೀಟ್ ಗೆ ಖಾರವಾದ ಉತ್ತರ…!

- Advertisement -

ಬೆಂಗಳೂರು: ಕೇಂದ್ರ ವಿತ್ತ ಸಚಿವೆಯಾಗಿ ಆಯ್ಕೆಯಾಗಿರೋ ನಿರ್ಮಲಾ ಸೀತಾರಾಮನ್ ರವರಿಗೆ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಶುಭ ಕೋರಿದ್ದಾರೆ. ಆದ್ರೆ ರಮ್ಯಾ ಮಾಡಿರೋ ಈ ಟ್ವೀಟ್ ಗೆ ಕೆಲ ನೆಟ್ಟಿಗರು ಖಾರವಾಗಿ ಉತ್ತರಿಸಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಶುಭ ಕೋರುವ ಸಲುವಾಗಿ ಟ್ವೀಟ್ ಮಾಡಿರುವ ರಮ್ಯಾ, ಮಹಿಳೆಯಾಗಿ 1970ರಲ್ಲಿ ಇಂದಿರಾ ಗಾಂಧಿ ನಿಭಾಯಿಸಿದ ಜವಾಬ್ದಾರಿಯುತ ಖಾತೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ರವರಿಗ ನನ್ನ ಅಭಿನಂದನೆಗಳು. ಆದ್ರೆ ಇದೀಗ ದೇಶದ ಜಿಡಿಪಿಯಲ್ಲಿ ಚೇತರಿಕೆ ಕಾಣುತ್ತಿಲ್ಲ. ನಿಮ್ಮ ಕಾರ್ಯವೈಖರಿ ದೇಶದ ಅರ್ಥವ್ಯವಸ್ಥೆಯನ್ನು ಸುಧಾರಿಸುತ್ತೆ ಅಂತ ನಾನು ನಂಬಿದ್ದೇನೆ. ನಿಮಗೆ ನಮ್ಮ ಶುಭ ಹಾರೈಕೆ ಮತ್ತು ಬೆಂಬಲ ಸದಾ ಇರುತ್ತದೆ ಅಂತ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಹಲವರು, ಲೋಕಸಭಾ ಚುನಾವಣೆಯಲ್ಲಿ ಮತವನ್ನೇ ಚಲಾಯಿಸದ ನೀವು ಸಲಹೆ ನೀಡೋದು ಸರಿಯಾ ಅಂತ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಎಲ್ಲಾ ಮಹಿಳೆಯರು ಉತ್ತಮವಾದ ಕಾರ್ಯವನ್ನೇ ಮಾಡಿದ್ದಾರೆ, ಆದ್ರೆ ರಮ್ಯಾ ಮೇಡಂ ತಾವೇನು ಮಾಡುತ್ತಿದ್ದೀರಿ. ಬೇರೆಯವರ ಕಾಲೆಳೆಯೋದನ್ನು ಬಿಟ್ಟು ತಮ್ಮ ತಲೆಯಲ್ಲೇನಾದ್ರೂ ಉತ್ತಮ ವಿಚಾರಗಳು ಇದೆಯಾ ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗೆ ಹಲವರು ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

Latest Posts

Don't Miss