‘ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದಿಂದ ನೊಂದು ಡಿ.ಕೆ ಸುರೇಶ್‌ ತಮ್ಮ ಆಕ್ರೋಶ ಹೊರಹಾಕಿದ್ದಾರೆ’

Political News: ಡಿ.ಕೆ.ಸುರೇಶ್ ದೇಶ ಇಬ್ಭಾಗವಾಗುವ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಆದರೆ ಕಾಂಗ್ರೆಸ್‌ನ ಹಲವು ನಾಯಕರು ಸುರೇಶ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೀಗ ಸಿಎಂ ಕೂಡ ಹೀಗೆ ಹೇಳಿದ್ದು, ದೇಶ ವಿಭಜನೆಯಾಗಬೇಕು ಎಂದು ನಾವು ಯಾರೂ ಬಯಸುವುದಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದಿಂದ ನೊಂದು ಡಿ.ಕೆ ಸುರೇಶ್‌ ಅವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ ಅಷ್ಟೆ ಎಂದು ಹೇಳುವ ಮೂಲಕ, ಸುರೇಶ್ ಹೇಳಿಕೆಯನ್ನು ಸಿಎಂ ಕೂಡ ಸಮಮರ್ಥಿಸಿಕೊಂಡಿದ್ದಾರೆ.

ನಮಗೆ ದಕ್ಷಿಣ ಭಾರತ ಬೇರೆ ದೇಶವಾಗಬೇಕು ಅನ್ನೋದು ವಿಷಯವಲ್ಲ. ಇಡೀ ದೇಶ ಅಖಂಡವಾಗಿರಬೇಕು. ನಾವು ದೇಶ ವಿಭಜನೆ ಮಾಡಿ ಅಂತಾ ಕೇಳುವುದಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಅಲ್ಲದೇ ಬಿಜೆಪಿಯವರು ಇದಕ್ಕೆ ವಿರೋಧಿಸುತ್ತಿದ್ದಾರಲ್ಲಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಸಿಎಂ, ಬಿಜೆಪಿಯವರಿಗೆ ಬೇರೆ ವಿಷಯವಿಲ್ಲ. ಬಜೆಟ್ ಮಂಡನೆ ಮಾಡಿದ್ದಾರೆ. ನಿರುದ್ಯೋಗಿಗಳ ಬಗ್ಗೆ, ರೈತರ ಸಮಸ್ಯೆ ಬಗ್ಗೆ, ಬರಗಾಲದ ಬಗ್ಗೆ, ಇದ್ಯಾವುದರ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಅದನ್ನು ಬಿಟ್ಟು ಇಂಥಾದ್ದೆಲ್ಲ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತಕ್ಕಾಗಿ ದೇಶ ಮಾರುವುದಕ್ಕೂ ಹೇಸಿಗೆ ಪಡದವರು ಕಾಂಗ್ರೆಸ್ಸಿಗರು: ಅರವಿಂದ್ ಬೆಲ್ಲದ್

‘ಕರ್ನಾಟಕದಲ್ಲಿ ಕಾಂಗ್ರೆಸ್ ತಂದ ಯೋಜನೆ ನೋಡಿಯಾದರೂ ಕೇಂದ್ರ ಸರಕಾರ ಬಜೆಟ್ ಮಂಡಿಸಬಹುದಿತ್ತು’

ಕಾಂಗ್ರೆಸ್ ನಾಯಕನ ಗ್ಯಾರಂಟಿ ರದ್ದು ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ

About The Author