ಇಂದು ವಿಶ್ವ ತಾಯಂದಿರ ದಿನವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ತಾಯಿಗೆ ಶುಭಕೋರಿದ್ದಾರೆ. ಟ್ವೀಟ್ ಮೂಲಕ ಶುಭಕೋರಿರುವ ಡಿಕೆಶಿ, “ಅಮ್ಮ” ಎನ್ನುವ ಪದವನ್ನು ವರ್ಣಿಸಲು ಸಾಧ್ಯವಿಲ್ಲ, ಕಾರಣ ಅದು ಕೇವಲ ಪದವಲ್ಲ, ಅದೊಂದು ಪರಿಪೂರ್ಣ ಅನುಭೂತಿ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿಯಾಗಿರುವ ಅಮ್ಮ , ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದು, ಎಲ್ಲಾ ಪ್ರೀತಿಯ ಮಾತೃ ಹೃದಯಗಳಿಗೆ ವಿಶ್ವ ತಾಯಂದಿರ ದಿನದ ಮನಃಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಚುನಾವಣೆ ಮುಗಿದ ಬಳಿಕ ತಾಯಿಯನ್ನ ಭೇಟಿಯಾಗಿದ್ದ ಡಿಕೆಶಿ ಮತ್ತು ಡಿಕೆ ಸುರೇಶ್, ತಾಯಿಯ ಆಶೀರ್ವಾದ ಪಡೆದುಕೊಂಡಿದ್ದರು. ಡಿಕೆಶಿ ಮಾತ್ರೆ ನುಂಗುವುದನ್ನು ನೋಡಿದ್ದ ಅವರ ತಾಯಿ, ಓಡಾಟ ಹೆಚ್ಚಾ ಎಂದು ಪ್ರಶ್ನಿಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳಿದ್ದರು. ಚುನಾವಣೆ ಪ್ರಚಾರದಲ್ಲಿದ್ದ ಡಿಕೆಶಿ, ತಮ್ಮ ಕುಟುಂಬಸ್ಥರೊಂದಿಗೆ ಸರಿಯಾಗಿ ಸಮಯ ಕಳೆಯಲು ಕೂಡ ಪುರುಸೊತ್ತು ಸಿಗುತ್ತಿಲ್ಲವೆಂದು ಎಫ್‌ಎಂ ಒಂದರಲ್ಲಿ ಹೇಳಿದ್ದರು.
"ಅಮ್ಮ" ಎನ್ನುವ ಪದವನ್ನು ವರ್ಣಿಸಲು ಸಾಧ್ಯವಿಲ್ಲ, ಕಾರಣ ಅದು ಕೇವಲ ಪದವಲ್ಲ, ಅದೊಂದು ಪರಿಪೂರ್ಣ ಅನುಭೂತಿ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿಯಾಗಿರುವ ಅಮ್ಮ , ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದು, ಎಲ್ಲಾ ಪ್ರೀತಿಯ ಮಾತೃ ಹೃದಯಗಳಿಗೆ ವಿಶ್ವ ತಾಯಂದಿರ ದಿನದ ಮನಃಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.… pic.twitter.com/vbRZqieCne
— DK Shivakumar (@DKShivakumar) May 14, 2023
‘ನಾನು ಸೋತು ಗೆದ್ದಿದ್ದೇನೆ. ರೇವಣ್ಣ ಗೆದ್ದು ಸೋತಿದ್ದಾರೆ. 2028ರ ಚುನಾವಣೆಗೆ ನಾಳೆಯಿಂದಲೇ ಸಿದ್ಧನಾಗ್ತೇನೆ’