Tuesday, May 30, 2023

Latest Posts

‘ಯಡಿಯೂರಪ್ಪ ಸಿಎಂ ಆಗೋ ಆಸೆ ಪಡಲಿ, ಪಾಪ ತಪ್ಪೇನಿಲ್ಲ’- ಸಚಿವ ಡಿಕೆಶಿ

- Advertisement -

ಬೆಂಗಳೂರು: ರಾಜ್ಯ ಸರ್ಕಾರ ಪತನವಾಗಲಿದೆ ಅನ್ನೋ ಯಡಿಯೂರಪ್ಪ ಹೇಳಿಕೆಗೆ ಸಚಿವ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪನವರಿಗೆ ಸಿಎಂ ಆಗೋ ಆಸೆ ಇದೆ, ಪಾಪ ಆಸೆ ಪಡಲಿ ಅದರಲ್ಲಿ ತಪ್ಪೇನಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ಕೈಗೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರೋ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಡಿಕೆಶಿ ಟಾಂಗ್ ನೀಡಿದ್ದಾರೆ. ಸರಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರಿಗೆ ಸಂತೋಷ ಸಿಗುವುದಾದರೆ ಸಿಗಲಿ ನಮಗೇನೂ ಬೇಸರವಿಲ್ಲ. ಕಳೆದೊಂದು ವರ್ಷದಿಂದಲೂ ಯಡಿಯೂರಪ್ಪನವರು ಇದೇ ರೀತಿ ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ನಾವು ಯಡಿಯೂರಪ್ಪನವರ ಭವಿಷ್ಯವನ್ನೂ ನೋಡಿದ್ದೇವೆ, ಬಿಜೆಪಿ ನಾಯಕರ ಭವಿಷ್ಯವನ್ನೂ ನೋಡಿದ್ದೇವೆ’ ಎಂದು ಕಟಕಿಯಾಡಿದರು.

ಇನ್ನು ರಾಜ್ಯದ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದು ತಾವು ಸಿಎಂ ಆಗಬೇಕೆಂಬ ಆಸೆ ಯಡಿಯೂರಪ್ಪನವರದ್ದು. ಪಾಪ, ಅವರ ಆಸೆ ಅವರು ಪಡಲಿ, ಅದರಲ್ಲಿ ತಪ್ಪೇನೂ ಇಲ್ಲ ಅಂತ ಸಚಿವ ಡಿಕೆಶಿ ಲೇವಡಿ ಮಾಡಿದ್ದಾರೆ.

- Advertisement -

Latest Posts

Don't Miss