Thursday, August 21, 2025

Latest Posts

ಮಹಾಕುಂಭದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಡಿಕೆಶಿ ಪುತ್ರಿ ಐಶ್ವರ್ಯ

- Advertisement -

Political News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಪೂರ್ಣ ಮಹಾ ಕುಂಭ ಮೇಳ ನಡೆಯುತ್ತಿದ್ದ 40 ಕೋಟಿಗೂ ಅಧಿಕ ಜನ ಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಇದೀಗ ಡಿಸಿಎಂ ಡಿಕೆಶಿ ಮಗಳು ಐಶ್ವರ್ಯಾ ಕೂಡ ಕುಂಭ ಮೇಳಕ್ಕೆ ಹೋಗಿ, ಹಿಂದೂ ಮಹಾ ಮೇಳದಲ್ಲಿ ಭಾಗಿಯಾಗಿದ್ದಾರೆ.

ತ್ರಿವೇಣಿ ಸಂಗಮದಲ್ಲಿ ಮುಳುಗಿ, ಕುಂಭ ಮೇಳದಲ್ಲಿ ಭಾಗವಹಿಸಿರುವ ಐಶ್ವರ್ಯಾ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಮಹಾಕುಂಭ ಮೇಳ. ಇದೊಂದು ಪದಗಳಿಗೆ ಸಿಗದ ಅನುಭವ ಎಂದು ಐಶ್ವರ್ಯಾ ಹೇಳಿದ್ದಾರೆ.

ರಾಜಕೀಯ ಗಣ್ಯರು, ಸೆಲೆಬ್ರಿಟಿಗಳು, ಕೋಟಿ ಕೋಟಿ ಶಿವ ಭಕ್ತರು ಈಗಾಗಲೇ ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಗಂಗಾಸ್ನಾನ ಮಾಡಿದ್ದಾರೆ. 144 ವರ್ಷಗಳಿಗೆ ಒಮ್ಮೆ ಬರುವ ಈ ಕುಂಭ ಮೇಳದಲ್ಲಿ ಭಾಗವಹಿಸಲೇಬೇಕೆಂದು ಹಲವರು ಅಂದುಕೊಂಡಿದ್ದು, ಪ್ರಯಾಗ್‌ರಾಜ್‌ಗೆ ಜನ ಸಾಗರವೇ ಹರಿದು ಬರುತ್ತಿದೆ.

- Advertisement -

Latest Posts

Don't Miss