political news:
ರಾಜ್ಯ ರಾಜಕೀಯದಲ್ಲಿ ಪಕ್ಷದ ನಅಯಕರು ವಿರೋಧ ಪಕ್ಷದವರನ್ನು ಕಾಲೆಳೆಯಲು ಮತ್ತು ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಲು ಹಲವಾರು ತಂತ್ರಗಳನ್ನು ಮಾಡುತಿದ್ದಾರೆ.ಈ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳೆ ಅವರು ಡಿಕೆ ಶಿವಕುಮಾರ್ ಅವರು ತಮ್ಮ ಆಸ್ತಿಯ ವಿವರದ ಬಗ್ಗೆ ಮಾತನಾಡಿರುವ ಆಡಿಯೋವನ್ನು ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದರು. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದಕ್ಕೆ ತರುವ ಕೆಲಸ ಮಾಡಿದರು. ಈಗ ಮತ್ತೊಮ್ಮೆ ಸಿಡಿ ವಿಚಾರ ಬಗ್ಗೆ ರಾಜಕೀಯದಲ್ಲಿ ಸುದ್ದಿಗಳು ಹರಿದಾಡುತ್ತಿವೆ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಹೆದರಿಸಿರುವ ವಿಚಾರವನ್ನು ರಮೇಶ್ ಜಾರಕಿಹೊಳೆ ಬಹಿರಂಗಪಡಿಸಿದ್ದಾರೆ.
ಸಿಡಿ ವಿಚಾರವಿರುವ ಬಗ್ಗೆ ಹೇಳಿಕೆ ನೀಡಿರುವ ರಮೇಶ್ ಜಾರಕಿಹೊಳೆ ಡಿಕೆಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಹೆದರಿಸುತ್ತಿದ್ದಾರಂತೆ. ಬಿಜೆಪಿ ಸಚಿವರ ಅಕ್ರಮದ ಬಗ್ಗೆ ನನ್ನ ಬಳಿ ಸಿಡಿ ಇದೆ ನೀವೀನಾದರೂ ಕಾಂಗ್ರೆಸ್ ಪಕ್ಷಕ್ಕೆ ಬರದಿದ್ದರೆ ನಾನು ನಿಮ್ಮ ಸಿಡಿಯನ್ನು ಬಹಿರಂಗಪಡಿಸುತ್ತೇನೆ. ಎಂದು ಹೆದರಿಸಿದ್ದಾರೆಂದು ರಮೆಶ್ ಜಾರಕಿಹೊಳೆ ಸಮಾವೇಶದಲ್ಲಿ ತಿಳಿಸಿದ್ದಾರೆ.
ಇದರ ಕುರಿತು ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ನಾನು ಮೆಂಟಲ್ ಕೇಸ್ ಬಗ್ಗೆ ಮಾತನಾಡುವುದಿಲ್ಲ. ನಿಮಾನ್ಸ ಕೇಸ್ ಬಗ್ಗೆ ಮಾತನಾಡಲು ನನಗೆ ಸಮಯವಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.