Sunday, July 6, 2025

Latest Posts

ಕೊಟ್ಟ ಸಾಲ ಮತ್ತು ತೆಗೆದುಕೊಂಡ ಸಾಲ ಬೇಗ ಕೊಡುವುದಕ್ಕೆ ಈ ಎಲೆ ಪೂಜೆ ಮಾಡಿ

- Advertisement -

ಜೀವನ ಎಂದ ಮೇಲೆ ಕಷ್ಟ-ಸುಖಗಳು ಬರುವುದು ಸಾಮಾನ್ಯ ಹಾಗೆಯೆ ಎಲ್ಲ ಕಷ್ಟಗಳಿಗೂ ಕೂಡ ಪರಿಹಾರ ಎಂಬುದು ಇದ್ದೇ ಇರುತ್ತದೆ. ಆದರೆ ಅದನ್ನು ಹುಡುಕಿಕೊಂಡು ಸಮಸ್ಯೆ ಬಗೆಹರಿಸುವ ದಿಕ್ಕು ನಮಗೆ ಗೊತ್ತಿರಬೇಕು ಅಷ್ಟೇ. ಹಾಗೆಯೆ ಆ ರೀತಿಯ ಸಮಸ್ಯೆಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಆರ್ಥಿಕ ಸಮಸ್ಯೆ. ಇದು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ ಬಂದು ಹೋಗುತ್ತದೆ ನಮಗೆ ಏನಾದರೂ ಹಣಕಾಸಿನ ಸಮಸ್ಯೆ ಬಂದಾಗ ನಾವು ಬೇರೆಯವರ ಬಳಿ ಸಾಲ ತೆಗೆದುಕೊಳ್ಳುತ್ತೇವೆ. ಹಾಗೆಯೆ ಬೇರೆಯವರು ಸಮಸ್ಯೆ ಎಂದು ಬಂದಾಗ ಅವರಿಗೂ ಕೂಡ ಸಾಲ ಕೊಟ್ಟಿರುತ್ತೇವೆ. ಹೀಗೆ ಸಾಲ ಕೊಡುವುದು ತೆಗೆದುಕೊಳ್ಳುವುದು ಎಲ್ಲವೂ ಜೀವನದಲ್ಲಿ ಸಾಮಾನ್ಯ. ಆದರೆ ಕೊಟ್ಟ ಸಾಲವೆ ಆಗಲಿ ತೆಗೆದುಕೊಂಡ ಸಾಲವೆ ಆಗಲಿ ಬೇಗ ಕೊಡಬೇಕು. ಬೇಗ ಕೊಟ್ಟ ರೆ ಒಳ್ಳೆಯದು. ಆದರೆ ತೆಗೆದುಕೊಂಡ ಸಾಲ ಆಗ ಕೊಡುತ್ತೇನೆ, ಈಗ ಕೊಡುತ್ತೇನೆ ಎಂದರೆ ನಮಗೆ ಸಮಸ್ಯೆ. ತೆಗೆದುಕೊಂಡ ನಮ್ಮ ಹಣ ನಮಗೆ ಸರಿಯಾದ ಸಮಯಕ್ಕೆ ಸಿಗದೆ, ನಾವು ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ.

ಇನ್ನು ಅದೇ ರೀತಿ ನಾವು ಬೇರೆಯವರ ಬಳಿ ಸಾಲ ತೆಗೆದುಕೊಳ್ಳುತ್ತೇವೆ, ಅದನ್ನು ಸರಿಯಾದ ಸಮಯಕ್ಕೆ ಕೊಡಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರು ಆಗುವುದೇ ಇಲ್ಲ. ಕೆಲವು ಬಾರಿ ಹಣ ಇರುತ್ತದೆ ಸಾಲ ಕೊಟ್ಟು ಬಿಡಬೇಕು ಎಂದು ಅಂದು ಕೊಳ್ಳುವ ಒತ್ತಿಗೆ, ಮತ್ತೆ ಇನ್ನೇನಾದರೂ ಸಮಸ್ಯೆ ಬಂದು ಬಿಡುತ್ತದೆ. ಆದರೆ ಈ ರೀತಿಯ ಸಮಸ್ಯೆಗಳಿಂದ ದೂರ ಆಗಲು ಪರಿಹಾರ ಕೂಡ ಇದೆ. ಅದು ಏನೆಂದರೆ..? ಬಿಳಿ ಎಕ್ಕದ ಗಿಡಕ್ಕೆ ಹಲವಾರು ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇದೆ. ಅದಕ್ಕಾಗಿಯೇ ಈ ಬಿಳಿ ಎಕ್ಕದ ಗಿಡವನ್ನು ಪೂಜೆ ಮಾಡುತ್ತಾರೆ. ಈ ಹೂವನ್ನು ಪೂಜೆಗೆ ಬಳಕೆ ಮಾಡುತ್ತಾರೆ. ಅದರಲ್ಲೂ ಗಣಪತಿಗೆ ಈ ಬಿಳಿ ಎಕ್ಕದ ಹೂವಿನ ಹಾರ ಮಾಡಿ ಹಾಕಲಾಗುತ್ತದೆ. ಹಾಗೆಯೆ ಈ ಎಕ್ಕದ ಗಿಡ ಆಯುರ್ವೇದದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದರ ಎಲೆ, ಹೂವು, ಕಾಂಡ ಎಲ್ಲವೂ ಕೂಡ ಔಷಧಿಗೆ ಬಳಸಲಾಗುತ್ತದೆ. ಅಮಾವಾಸ್ಯೆಯ ದಿನ ಮಧ್ಯಾಹ್ನ 12 ಗಂಟೆಯ ಒಳಗೆ ನೀರು, ಪೂಜೆ ಸಾಮಾನುಗಳನ್ನು ತೆಗೆದುಕೊಂಡು ಹೋಗಿ , ಬಿಳಿ ಎಕ್ಕದ ಗಿಡಕ್ಕೆ ನೀರು ಹಾಕಿ, ಹೂವು ಇಟ್ಟು, ದೀಪ ಹಚ್ಚಿ, ಅರಿಶಿಣ ಕುಂಕುಮ ಇಟ್ಟು ಪೂಜೆ ಮಾಡಬೇಕು.

ನ೦ತರ ಎಕ್ಕದ ಹೂವು, ಮೂರು ಎಲೆ, ಒಂದು ಕಡ್ಡಿ ಕಿತ್ತುಕೊಂಡು ಬರಬೇಕು. ಬಂದ ನ೦ತರ ಆ ಮೂರನ್ನೂ ಒಂದು ಅರಿಶಿಣ ದಾರದಿಂದ ಕಟ್ಟಿ ಬೇಕು. ನ೦ತರ ಒಂದು ತಟ್ಟೆಗೆ ಅಕ್ಕಿ ತುಂಬಿ, ಅದರ ಒಳಗೆ ಆ ಎಕ್ಕದ ಎಲೆ. ಹೂವು. ಕಡ್ಡಿ. ಮೂರನ್ನೂ ದೇವರ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮ ಎಲ್ಲ ಆರ್ಥಿಕ ಸಮಸ್ಯೆ ದೂರ ಆಗುತ್ತದೆ.

- Advertisement -

Latest Posts

Don't Miss