Friday, July 11, 2025

Latest Posts

ಬೆನ್ನು ನೋವು ಸೊಂಟ ನೋವು ಕಾಡ್ತಾ ಇದ್ಯಾ? ಇಲ್ಲಿವೆ ಅವೆಲ್ಲದಕ್ಕೂ ಪರಿಹಾರಗಳು

- Advertisement -

Health Tips: ವಯಸ್ಸಾದ ಬಳಿಕ ಆರೋಗ್ಯ ಸಮಸ್ಯೆ ಬರೋದು ಸಹಜ. ಆದರೆ ಕೆಲವೊಂದು ಘಟನೆ ನಡೆದು ಆರೋಗ್ಯ ಸಮಸ್ಯೆ ಬಂದರೆ, ಅದನ್ನು ಹೋಗಲಾಡಿಸುವುದು ತುಂಬಾ ಕಷ್ಟದ ಕೆಲಸ. ಉದಾಹರಣೆಗೆ ಭಾರವಾದ ವಸ್‌ತು ಎತ್ತಲು ಹೋಗಿ, ಸೋಂಟ ನೋವಾಗುವುದು. ಎಲ್ಲೋ ಬಿದ್ದು, ಬೆನ್ನು ನೋವಾಗುವುದು. ಈ ರೀತಿ ಸಮಸ್ಯೆಗಳಿಗೆ ಪರಿಹಾರ ಬಲು ಕಷ್ಟ. ಹಾಗಾಗಿ ಅಂಥ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪಾರಂಪರಿಕ ವೈದ್ಯೆ ಡಾ.ಪವಿತ್ರಾ ವಿವರಿಸಿದ್ದಾರೆ.

ನೀವು ವೈದ್ಯರ ಬಳಿ ಹೋದಾಗ, ಸೊಂಟ ಉಳುಕುವುದು, ಅಥವಾ ಬೆನ್ನು ಮೂಳೆ ಮುರಿದಾಗ, ಆಪರೇಷನ್ ಮಾಡಲೇಬೇಕು ಅನ್ನೋದು ಕಾಮನ್. ಆದರೆ, ಇಂಥ ಸಮಸ್ಯೆಗಳಿಗೆ ಆಪರೇಷನ್‌ ಇಲ್ಲದೇ, ಗುಣಪಡಿಸಬಹುದು ಅಂತಾರೆ ಪಾರಂಪರಿಕ ವೈದ್ಯರಾದ ಪವಿತ್ರಾ.

ನಮ್ಮ ಬೆನ್ನಿನ ಮೂಳೆಯಲ್ಲಿ ಡಿಸ್ಕ್ ಅನ್ನುವ ಒಂದು ಭಾಗವಿದೆ. ಇದು ನಾವು ಫ್ಲೆಕ್ಸಿಬಲ್ ಆಗಿ ಇರಲು ಸಹಕರಿಸುತ್ತದೆ. ಈ ಡಿಸ್ಕ್ ಇರುವ ಕಾರಣಕ್ಕಾಗಿಯೇ ನಾವು ಬಗ್ಗಬಹುದು, ನಮ್ಮ ದೇಹವನ್ನು ಬೇಕಾದ ರೀತಿ ಬೆಂಡ್ ಮಾಡಬಹುದು. ಈ ಡಿಸ್ಕ್ ಕುಸಿತ ಕಂಡಾಗಲೇ, ನಮ್ಮ ಮೂಳೆ ತನ್ನ ಶಕ್ತಿ ಕಳೆದುಕೊಳ್ಳಲು ಶುರು ಮಾಡುತ್ತದೆ. ಹಾಗಾಗಿ ಡಿಸ್ಕ್ ಅನ್ನೋದು ತುಂಬಾ ಮುಖ್ಯವಾಗಿರುತ್ತದೆ.

ಹಾಗಾದ್ರೆ ಬೆನ್ನು ಮೂಳೆ, ಸೊಂಟದ ಭಾಗ ಗಟ್ಟಿಮುಟ್ಟಾಗಿ ಇರಬೇಕು ಅಂದ್ರೆ, ನಾವು ಹೊಟ್ಟೆಯ ಭಾರವನ್ನು ಇಳಿಸಬೇಕು. ದೊಡ್ಡ ಹೊಟ್ಟೆ ಇದ್ದರೆ, ಅದನ್ನ ಕರಗಿಸಬೇಕು. ವ್ಯಾಯಾಮ, ವಾಕಿಂಗ್, ಡಯಟ್ ಎಲ್ಲವನ್ನೂ ಮಾಡಿ, ಹೊಟ್ಟೆಯ ತೂಕ ಇಳಿಸಿಕೊಳ್ಳಬೇಕು. ಹೊಟ್ಟೆಯ ಆರೋಗ್ಯ ಸರಿಪಡಿಸಿಕೊಳ್ಳಬೇಕು. ಆರೋಗ್ಯಕರವಾದ ಆಹಾರ ಸೇವಿಸಬೇಕು. ನೀರು ಕುಡಿಯುವ ಪ್ರಮಾಣ ಹೆಚ್ಚಿಸಬೇಕು.

ಇನ್ನು ಮುಖ್ಯವಾಗಿ ಹೆಚ್ಚು ಕಾಫಿ ಅಥವಾ ಟೀ ಕುಡಿಯುವ ಚಟವೇ ಮೂಳೆಯ ಆರೋಗ್ಯವನ್ನು ಹಾಳು ಮಾಡುತ್ತದೆ. ಅಲ್ಲದೇ, ಹೊಟ್ಟೆಯ ಆರೋಗ್ಯವನ್ನು ಕೂಡ ಈ ಚಟ ಹಾಳು ಮಾಡುತ್ತೆ. ಹಾಗಾಗಿ ಹೆಚ್ಚು ಕಾಫಿ, ಟೀ ಕುಡಿಯಬೇಡಿ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಕಾಫಿ ಟೀ ಸೇವನೆ ಮಾಡಬೇಡಿ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss