Health Tips: ಫ್ರಿಡ್ಜ್‌ನಲ್ಲಿ ಇಟ್ಟಿರುವ ನೀರು ಅಥವಾ ಪೇಯ ಕುಡಿಯುವಾಗ ತುಂಬಾ ಹಿತ ಎನ್ನಿಸುತ್ತೆ. ಅದರಲ್ಲೂ ಬೇಸಿಗೆಯಲ್ಲಿ ತಂಪು ತಂಪು ನೀರು, ಪಾನೀಯ ಸಿಕ್ಕರೆ, ಫುಲ್ ಖುಷ್ ಆಗಿ ಬಿಡ್ತೀವಿ ನಾವು. ಆದರೆ ಅತೀ ಹೆಚ್ಚು ಅಥವಾ ಪದೇ ಪದೇ, ಪ್ರತಿನಿತ್ಯ ಫ್ರಿಜ್‌ನಲ್ಲಿ ಇರಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಮಾರಕವಾಗಿದೆ. ಹಾಗಾದ್ರೆ ಇದರಿಂದಾಗುವ ತೊಂದರೆಗಳೇನು ಅಂತಾ ತಿಳಿಯೋಣ ಬನ್ನಿ..
ನೀವು ರೂಮ್ ಟೆಂಪರೇಚರ್‌ನಲ್ಲಿ ಇಟ್ಟ ನೀರಿನ ಸೇವನೆ ಮಾಡುವುದರಿಂದ ನಿಮಗೆ ಹೆಚ್ಚು ಬಾಯಾರಿಕೆಯಾಗುವುದಿಲ್ಲ. ಆದರೆ ನೀವು ಫ್ರಿಜ್‌ನಲ್ಲಿ ಇರಿಸಿದ ನೀರಿನ ಸೇವನೆ ಮಾಡುವುದರಿಂದ ನಿಮಗೆ ಪದೇ ಪದೇ ಬಾಯಾರಿಕೆಯಾಗುತ್ತದೆ. ಮತ್ತು ಬಾಯಾರಿಕೆಯಾದಾಗೆಲ್ಲ ಫ್ರಿಜ್ ನೀರೇ ಕುಡಿಯಬೇಕು ಎನ್ನಿಸುತ್ತದೆ. ಇದರಿಂದ ನಿಮ್ಮ ಜೀರ್ಣಕ್ರಿಯೆಗೆ ಪೆಟ್ಟು ಬೀಳುತ್ತದೆ.
ಫ್ರಿಜ್ ನೀರಿನ ಸೇವನೆಯಿಂದಾಗುವ ಇನ್ನೊಂದು ಆರೋಗ್ಯ ಸಮಸ್ಯೆ ಅಂದ್ರೆ, ದೇಹದಲ್ಲಿ ಉಷ್ಣತೆ ಹೆಚ್ಚುವುದು. ದೇಹದಲ್ಲಿ ಉಷ್ಣತೆ ಹೆಚ್ಚುವುದರಿಂದ ಉರಿಮೂತ್ರ ಸಮಸ್ಯೆ, ಮಲಬದ್ಧತೆ ಸಮಸ್ಯೆ ಸೇರಿ ಹಲವು ಸಮಸ್ಯೆಗಳು ಉಂಟಾಗುತ್ತದೆ. ಅಲ್ಲದೇ, ನಿಮ್ಮ ಸೌಂದರ್ಯವೂ ಕುಂದಿಹೋಗುತ್ತದೆ.
ಫ್ರಿಜ್ ನೀರಿನ ಸೇವನೆಯಿಂದ ಗಂಟಲ ಬೇನೆ ಶುರುವಾಗುತ್ತದೆ. ಕೆಮ್ಮು, ಗಂಟಲು ನೋವಾಗುವುದೆಲ್ಲ ಆಗುತ್ತದೆ. ಅಲ್ಲದೇ, ಆಹಾರ ಸೇವನೆಗೂ ನಿಮಗೆ ಕಷ್ಟವಾಗುತ್ತದೆ. ಕಫದ ಸಮಸ್ಯೆ ಕೂಡ ಶುರುವಾಗುತ್ತದೆ.
ಹೃದಯದ ಆರೋಗ್ಯ, ಮೆದುಳಿನ ಆರೋಗ್ಯ, ಲಿವರ್, ಕಿಡ್ನಿ ಎಲ್ಲದರ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಫ್ರಿಜ್‌ನಲ್ಲಿ ಇರಿಸಿದ ನೀರಿನ ಸೇವನೆ ಮಾಡಬಾರದು. ಅತೀಯಾದ ತಂಪು ನೀರಿನ ಸೇವನೆಯಿಂದ, ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆ ಸೇರಿ ಹಲವು ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಇನ್ನು ನಿಮಗೆ ತಂಪು ತಂಪು ನೀರು ಕುಡಿಯಲೇಬೇಕು ಎಂದರೆ, ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿಸಿಡಿ. ರಾತ್ರಿ ತುಂಬಿಸಿಟ್ಟ ನೀರು, ಮರುದಿನ ಬೆಳಿಗ್ಗೆ ಎಂದರೆ, ತಂಪು ತಂಪಾಗಿರುತ್ತದೆ. ಮತ್ತು ಆರೋಗ್ಯಕ್ಕೂ ಉತ್ತಮ. ಮತ್ತು ಮಡಿಕೆ ನೀರು ಕುಡಿದರೆ ಯಾವ ರೋಗವೂ ನಿಮ್ಮ ಬಳಿ ಸುಳಿಯುವುದಿಲ್ಲ.