Thursday, April 3, 2025

Latest Posts

ದೇಶದಲ್ಲಿ ಎಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ ಗೊತ್ತಾ..? ಕೇಂದ್ರದ ಶಾಕಿಂಗ್ ವರದಿಯಲ್ಲಿ ಏನಿದೆ.?

- Advertisement -

Political News: ರಾಜ್ಯದಲ್ಲಿನ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಬೇಕೆಂದು ಹಲವು ನಿಯಮಗಳನ್ನು, ಕಾನೂನುಗಳನ್ನು ಜಾರಿಗೆ ತಂದರೂ ಸಹ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ಸರ್ಕಾರ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅಲ್ಲದೆ ಇದಕ್ಕೆ ಪೂರಕವಾಗಿ ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯು ಬೆಚ್ಚಿ ಬೀಳಿಸುವಂತಿದೆ.

ಇನ್ನೂ ಕೇಂದ್ರದ ಪ್ರಕಾರ ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13000 ಚದರ ಕಿಲೋಮೀಟರ್‌ಗಳಷ್ಟು ಅರಣ್ಯ ಭೂಮಿಯ ಒತ್ತುವರಿಯಾಗಿದೆ. ಹೀಗೆ ಒತ್ತುವರಿಯಾಗಿರುವ ಅರಣ್ಯ ಭೂಮಿಗಳಲ್ಲಿ ಮಧ್ಯಪ್ರದೇಶ ಮೊದಲನೇ ಸ್ಥಾನದಲ್ಲಿದೆ. ಅಲ್ಲದೆ ಅಚ್ಚರಿಯಾದರೂ ಸತ್ಯವಾಗಿದೆ, ಈ ರೀತಿಯಾಗಿ ಒತ್ತುವರಿಯಾಗಿರುವ ಪ್ರದೇಶವು ದೆಹಲಿ, ಸಿಕ್ಕಿಂ ಹಾಗೂ ಗೋವಾ ರಾಜ್ಯಗಳ ಒಟ್ಟಾರೆ ವಿಸ್ತೀರ್ಣಕ್ಕಿಂತಲೂ ಅಧಿಕವಾಗಿದೆ. ಅಂದಹಾಗೆ ಹೀಗೆ ಅರಣ್ಯ ಭೂಮಿಯ ಒತ್ತುವರಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ ಎಂಬ ಅಂಶವನ್ನು ವರದಿಯು ಹೊರಹಾಕಿದೆ.

13056 ಚ.ಕಿ.ಮೀ ಭೂಮಿ ಒತ್ತುವರಿ..

ಅಲ್ಲದೆ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಪರಿಸರ ಸಚಿವಾಲಯವು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ನೀಡಿದೆ. ಇನ್ನೂ 25 ರಾಜ್ಯಗಳಲ್ಲಿ ಒಟ್ಟು 13056 ಚದರ್‌ ಕಿಲೋಮೀಟರ್‌ಗಳಷ್ಟು ಅರಣ್ಯ ಭೂಮಿಯ ಒತ್ತುವರಿಯಾಗಿದೆ. ಅಲ್ಲದೆ ಇನ್ನೂ 10 ರಾಜ್ಯಗಳು ಅಂದರೆ ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್‌, ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರ್‌, ಲಡಾಖ್‌ಗಳು ಇದುವರೆಗೂ ತಮ್ಮಲ್ಲಿ ಒತ್ತುವರಿಯಾಗಿರುವ ಭೂಮಿಯ ಬಗ್ಗೆ ಮಾಹಿತಿ ನೀಡಿಲ್ಲ. ಅಂದಹಾಗೆ ನ್ಯಾಯಾಧೀಕರಣಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ 2024ರ ತನಕ 13.05 ಲಕ್ಷ ಹೆಕ್ಟೇರ್‌ ಭೂಮಿಯ ಒತ್ತುವರಿಯಾಗಿದೆ. ಈ ಪೈಕಿ 409.77 ಚದರ್‌ ಕಿಲೋಮೀಟರ್‌ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಒತ್ತುವರಿ ಆಗಿದ್ದೆಷ್ಟು..?

ಇನ್ನೂ ಪ್ರಮುಖವಾಗಿ ಮಧ್ಯಪ್ರದೇಶದಲ್ಲಿ 5460.9 ಕಿಲೋ ಮೀಟರ್‌ ಅರಣ್ಯ ಭೂಮಿ ಒತ್ತುವರಿಯಾದರೆ, 3.620 ಚದರ್‌ ಕಿಲೋಮೀಟರ್‌ ಹಾಗೂ ಕರ್ನಾಟಕವು 863.08 ಕಿಲೋ ಮೀಟರ್‌ ಅರಣ್ಯ ಭೂಮಿಯ ಒತ್ತುವರಿಯಾಗಿದೆ. ಮಹಾರಾಷ್ಟ್ರವು 575.54 ಚದರ್‌ ಕಿಲೋಮೀಟರ್‌, ಅರುಣಾಚಲ ಪ್ರದೇಶವು 534.90 ಚದರ್‌ ಕಿಲೋಮೀಟರ್‌ಗಳಷ್ಟು ಒತ್ತುವರಿಯಾಗಿದೆ. ಅಂದಹಾಗೆ ಕಳೆದ ವರ್ಷ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಅಲ್ಲದೆ ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅರಣ್ಯ ಭೂಮಿಯ ಒತ್ತುವರಿಯ ಬಗ್ಗೆ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೀಡುವಂತೆ ಸೂಕ್ತ ನಿರ್ದೇಶನ ನೀಡಿತ್ತು.

ಯಾವ್ಯಾವ ರಾಜ್ಯಗಳು ಮಾಹಿತಿ ನೀಡಿವೆ..?

ಯಾವ್ಯಾವ ರಾಜ್ಯಗಳು ಅರಣ್ಯ ಭೂಮಿ ಒತ್ತುವರಿ ಮಾಹಿತಿಯನ್ನು ಕೇಂದ್ರಕ್ಕೆ ನೀಡಿವೆ ಎನ್ನುವುದನ್ನು ನೋಡಿದಾಗ, ಅಂಡಮಾನ್‌-ನಿಕೋಬಾರ್‌, ಅಸ್ಸಾಂ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಚಂಡೀಗಢ, ಛತ್ತೀಸ್‌ಗಢ, ದಾದರ್‌ ಮತ್ತು ನಗರ್‌, ದಿಯು ಮತ್ತು ದಮನ್‌, ಕೇರಳ, ಲಕ್ಷದ್ವೀಪ, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ತಮಿಳುನಾಡು, ಪಂಜಾಬ್‌, ತ್ರಿಪುರಾ, ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್‌, ಸಿಕ್ಕಿಮ್‌, ಮಧ್ಯಪ್ರದೇಶ, ಮಿಜೋರಾಮ್‌ ಹಾಗೂ ಮಣಿಪು ಇವುಗಳು ತಮ್ಮ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿವೆ.

- Advertisement -

Latest Posts

Don't Miss