International News: ಜಗತ್ತಿನ ನಂಬರ್ ಒನ್ ಶ್ರೀಮಂತ, ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ..? ಕ್ರಿಪ್ಟೋ ಕರೆನ್ಸಿ, ಟ್ವೀಟರ್ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ಸುದ್ದಿಯಾಗುವ ಎಲಾನ್ ಮಸ್ಕ್ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಇರುವವರು.
ಅವರು ಸಾಮಾನ್ಯ ಜನರಂತೆ ಸಮಯ ಕಳೆಯುವುದಿಲ್ಲ. ಬದಲಾಗಿ, ನಂಬರ್ ಒನ್ ಪಟ್ಟದಲ್ಲಿ ಇರಲು ಏನೇನು ಮಾಡಬೇಕು ಅನ್ನೋ ಯೋಚನೆಯಲ್ಲೇ ಇರುತ್ತಾರೆ. ಹಾಗಾಗಿ ಅವರ ಸಮಯವೆಲ್ಲ ಹೆಚ್ಚಾಗಿ, ಕೆಲಸದಲ್ಲೇ ಇರುತ್ತದೆ. ಅಂಥವರೆಲ್ಲ ನಮ್ಮ ಹಾಗೆ ಹೆಚ್ಚೆಚ್ಚು ಹೊತ್ತು ಮೊಬೈಲ್, ಟಿವಿ ಬಳಸುವುದಿಲ್ಲ. ಬದಲಾಗಿ ಅವರಿಗೆ ಬರುವ ಕಾಲ್, ಮೆಸೇಜ್, ಸೋಶಿಯಲ್ ಮೀಡಿಯಾ ಎಲ್ಲವನ್ನೂ ಹ್ಯಾಂಡಲ್ ಮಾಡಲು ಜನರಿರುತ್ತಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಎಲಾನ್ ಮಸ್ಕ್, ತಾಾವು ಎಷ್ಟು ಗಂಟೆಗಳ ಕಾಲ ಮೊಬೈಲ್ ಬಳಸುತ್ತೇವೆ ಎಂದು ಹೇಳಿದ್ದಾರೆ. ತಾನು ದಿನಕ್ಕೆ ಒಂದು ಗಂಟೆಯಷ್ಟೇ ಮೊಬೈಲ್ ಬಳಸುತ್ತೇನೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಮೊಬೈಲ್ ತೆಗೆದು ತೋರಿಸಿ, ನೀವು ಎಷ್ಟು ಗಂಟೆ ಮೊಬೈಲ್ ಬಳಸುತ್ತೀರಿ ಎಂದು ಸಂದರ್ಶಕ ಹೇಳಿದಾಗ, ಎಲಾನ್ ಮೊಬೈಲ್ ತೆಗೆದು ತೋರಿಸಿದ್ದಾರೆ.
ಒಂದು ವಾರದಿಂದ ಎಲಾನ್ ಬರೀ 4 ನಿಮಿಷ ತಮ್ಮ ಮೊಬೈಲ್ ಬಳಸಿರುವುದು ತಿಳಿದು ಬಂದಿದೆ. ಈ ವೀಡಿಯೋ ನೋಡಿದವರು ಶಾಕ್ ಆಗಿದ್ದಾರೆ. ನಾವು ನೀವೆಲ್ಲ ಸಮಯ ಸಿಕ್ಕರೆ ಸಾಕು, ಮೊಬೈಲ್ ಓಪನ್ ಮಾಡಿ, ಗಂಟೆ ಗಟ್ಟಲೇ ಸ್ಕ್ರಾಲ್ ಮಾಡುತ್ತಲಿರುತ್ತೇವೆ. ಆದರೆ ಆ ಮೊಬೈಲ್, ನಾವು ಬಳಸುವ ಆ್ಯಪ್‌ಗಳ ಮಾಲೀಕರು ಮಾತ್ರ, ಮೊಬೈಲ್‌ನಿಂದ ದೂರವಿದ್ದು, ಆರೋಗ್ಯವಾಗಿ, ಆರ್ಥಿಕವಾಗಿ ಸಧೃಡರಾಗುತ್ತಿದ್ದಾರೆ.