ಕವಿರಾಜ್ ಅವರ ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ..?: Special Interview

Special Story: ಗೀತರಚನೆಕಾರ ಕವಿರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಹೇಗೆ ಗೀತರಚನೆಕಾರರಾಗಿದ್ದು, ಅವರು ಬರೆದ ಮೊದಲ ಹಾಡು ಯಾವುದು..? ಅವರಿಗೆ ಸಿಕ್ಕ ಮೊದಲ ಸಂಭಾವನೆ ಎಷ್ಟು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ಕರಿಯಾ ಸಿನಿಮಾಗಾಾಗಿ ಕವಿರಾಜ್ ಹಾಡು ಬರೆದಿದ್ದರು. ನನ್ನಲಿ ನಾನಿಲ್ಲಾ ಎಂಬ ಹಾಡನ್ನು ಬರೆದಿದ್ದೇ ಕವಿರಾಜ್. ಅದನ್ನು ತಿದ್ದಿ ತೀಡಿ ಸರಿ ಮಾಡಿದ್ದು, ಸಂಗೀತ ನಿರ್ದೇಶಕ ಗುರುಕಿರಣ್. ಇದು ಕವಿರಾಜ್ ಅವರು ಬರೆದಿದ್ದ ಮೊದಲ ಸಾಂಗ್ ಆಗಿತ್ತು. ಹಾಡು ರಿಲೀಸ್ ಆದ ಮೇಲೆ ಯಾವ ರೀತಿ ಫಲಿತಾಂಶ ಬಂತು ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಈಗಲೂ ಜನ ಆ ಹಾಡನ್ನು ಗುನುಗುತ್ತಾರೆ.

ಇದೇ ಸಿನಿಮಾದ ಇನ್ನೊಂದು ಹಾಡನ್ನು ಕವಿರಾಜ್ ಅವರೇ ಬರೆದಿದ್ದು. ಈ ಸಿನಿಮಾದಲ್ಲಿ ಹಾಡು ಬರೆದಿದ್ದಕ್ಕೆ, ಗುರುಕಿರಣ್ ಅವರು ಕವಿರಾಜ್ ಅವರಿಗೆ ಸಂಭಾವನೆ ನೀಡಿದ್ದರಂತೆ. ಗುರುಕಿರಣ್ ಸಂಭಾವನೆ ನೀಡುವಾಗ, ಅವರು ಆ ಬಗ್ಗೆ ಮಾತನಾಡುವುದಿಲ್ಲ. ಸುಮ್ಮನೆ ಬಂದು ದುಡ್ಡು ಕೊಟ್ಟು ಹೋಗಿಬಿಡುತ್ತಾರೆ. ಅದೇ ರೀತಿ ಕವಿರಾಜ್ ಅವರ ಕೈಗೆ ಅವರ ಮೊದಲ ಸಂಭಾವನೆ ಕೊಟ್ಟು ಸುಮ್ಮನೆ ನಡೆದಿದ್ದರು ಗುರುಕಿರಣ್.

ಹೀಗೆ ಕವಿರಾಜ್ ಗುರುಕಿರಣ್ ಅವರಿಂದ ಪಡೆದ ಮೊದಲ ಸಂಭಾವನೆ ಅಂದ್ರೆ, ಎರಡುವರೆ ಸಾವಿರ ರೂಪಾಯಿ. ಇದೇ ಗುರುಕಿರಣ್ ಅವರ ಮೊದಲ ಸ್ಯಾಲರಿ. ಕವಿರಾಜ್ ತಮ್ಮ ಮೊದಲ ಸಂಬಳ ಪಡೆದು ತುಂಬಾ ಖುಷಿಯಾಗಿದ್ದರು. ಬಳಿಕ ಅವರ ಟ್ಯಾಲೆಂಟ್‌ಗೆ ಅತ್ಯುತ್ತಮ ಅವಕಾಶಗಳು ಸಿಗುತ್ತ ಹೋಯಿತು. ಈ ಬಗ್ಗೆ ಸಂಪೂರ್ಣ ಸಂದರ್ಶನ ನೋಡಲು ವೀಡಿಯೋ ನೋಡಿ.

About The Author