Japan diet: ಇಂದಿನ ಕಾಲದಲ್ಲಿ ಡಯಟ್ ಮಾಡಿ, ತೂಕ ಇಳಿಸಿಕೊಳ್ಳುವುದು ಕಾಮನ್ ಆಗಿದೆ. ಆದರೆ ಕೆಲವರು ತೂಕ ಇಳಿಸಿಕೊಳ್ಳುವ ಭರದಲ್ಲಿ ಜೀವವನ್ನೇ ಕಳೆದುಕೊಂಡಿರುವ, ವಿಕಾರವಾಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ನಾವು ಡಯಟ್ ಮಾಡುವಾಗ ಅದಕ್ಕೇ ಅಂತಲೇ ಮೀಸಲಿರುವ ಫಿಟ್‌ನೆಸ್ ಮಾಸ್ಟರ್ ಭೇಟಿಯಾಗಿ, ಅವರ ಸಲಹೆ ಪಡೆದು, ಡಯಟ್ ಮಾಡಬೇಕು.
ಆದರೆ ಜಪಾನಿಗರು ಈ ರೀತಿ ಕ್ಲಾಸ್‌ಗೆ ಹೋಗಿ, ಕೋರ್ಸ್ ಮಾಡಿ ಡಯಟ್ ಮಾಡುವುದಿಲ್ಲ. ಬದಲಾಗಿ ಹಿರಿಯರು ಹೇಳಿಕೊಟ್ಟಿರುವ ಶೈಲಿಯಲ್ಲಿ ಡಯಟ್ ಮಾಡಿ, ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗಾದ್ರೆ ಜಪಾನಿಗರು ಬೇಗ ಸಣ್ಣಗಾಗಲು ಯಾವ ನಿಯಮ ಅನುಸರಿಸುತ್ತಾರೆ..? ಹೇಗೆ ಡಯಟ್ ಮಾಡುತ್ತಾರೆ ಅಂತಾ ತಿಳಿಯೋಣ ಬನ್ನಿ..
ಜಪಾನಿಗರು ಫಾಲೋ ಮಾಡುವ ಡಯಟ್ ಪ್ಲಾನ್ ಹೆಸರು ಹಾರಾ ಹಾಚಿ ಬೂ. ಇದರ ಅರ್ಥವೇನೆಂದರೆ, ನಮ್ಮ ಹೊಟ್ಟೆ ಶೇ.80ರಷ್ಟು ತುಂಬುವವರೆಗೂ ಮಾತ್ರ ಊಟ ಮಾಡಬೇಕು. ಪೂರ್ತಿ ಹೊಟ್ಟೆ ತುಂಬಿಸಬಾರದು. ಶೇ.20 ರಷ್ಟು ಹೊಟ್ಟೆ ಖಾಲಿ ಇದೆ ಎಂದಾಗ, ತಿನ್ನುವುದನ್ನು ನಿಲ್ಲಿಸಬೇಕು. ಇದರಿಂದ ದೇಹ ಕಡಿಮೆ ಕ್ಯಾಲರಿಯನ್ನು ಪಡೆಯುತ್ತದೆ. ಆಗ ಆರೋಗ್ಯಕರವಾಗಿಯೇ ನಿಮ್ಮ ತೂಕ, ಪ್ರತಿದಿನ ಕಡಿಮೆಯಾಗುತ್ತ ಹೋಗುತ್ತದೆ.
ಈ ಡಯಟ್ ಫಾಲೋ ಮಾಡುವುದರಿಂದ ನೀವು ಸ್ವಾದವನ್ನು ಅರಿಯಲು ಮತ್ತು ನಿಮ್ಮ ತೂಕ ಇಳಿಸಲು ಸಹಕರಿಸುತ್ತದೆ. ಅಲ್ಲದೇ, ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ಆದರೆ ನೆನಪಿರಲಿ, ಆದಷ್ಟು ಆರೋಗ್ಯಕರ ಆಹಾರವನ್ನೇ ನೀವು ಸೇವಿಸಬೇಕು. ಜಂಕ್ ಫುಡ್ ತಿಂದು, ನಾನು ಶೇ.80 ಪರ್ಸೆಂಟ್ ಆಹಾರ ಸೇವಿಸಿದೆ ಅಂದ್ರೆ, ಅದು ಎಂದಿಗೂ ನಿಮ್ಮ ದೇಹದ ತೂಕ ಇಳಿಸುವುದಿಲ್ಲ. ಬದಲಾಗಿ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. ಹಾಗಾಗಿ ಆರೋಗ್ಯಕರ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು.
ಅಲ್ಲದೇ ನೀವು ಈ ಜಪಾನ್ ಡಯಟ್ ಪ್ಲಾನ್ ಫಾಲೋ ಮಾಡಿದರೆ, ಹೊಟ್ಟೆಗೆ ಸಂಬಂಧಿಸಿದ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ. ಅಲ್ಲದೇ, ಬಿಪಿ, ಶುಗರ್, ಹಾರ್ಟ್ ಅಟ್ಯಾಕ್‌ನಂಥ ಮಾರಕ ಖಾಯಿಲೆಗಳೂ ನಿಮ್ಮ ಬಳಿ ಸುಳಿಯುವುದಿಲ್ಲ.