Valentines week
ಬೆಂಗಳೂರು(ಫೆ.11): ಈ ದಿನ ಪ್ರಾಮಿಸ್ ಡೇ. ಈ ವಾರ ವ್ಯಾಲೆಂಟೈನ್ಸ್ ವಾರ ಇರೋದರಿಂದ ಪ್ರತೀ ವಾರವೂ ಒಂದೊಂದು ದಿನವನ್ನು ಆಚರಣೆ ಮಾಡುತ್ತಾರೆ. ಹಾಗೆಯೇ ಈ ದಿನ ಪ್ರಾಮಿಸ್ ಡೇ ಸೆಲೆಬ್ರೇಷನ್ ಮಾಡುತ್ತಾರೆ. ಪ್ರೇಮಿಗಳಿಗೆ ಈ ದಿನ ತುಂಬಾ ಸ್ಪೆಷಲ್ ದಿನವಾಗಿರೋದರಿಂದ ಡಿಫರೆಂಟ್ ಆಗಿ ಪ್ರಾಮಿಸ್ ಮಾಡೋಕೆ ಕಾಯುತ್ತಿರುತ್ತಾರೆ. ತಮ್ಮ ಬಾಂಧವ್ಯ ಇನ್ನಷ್ಟು ಹೆಚ್ಚಿಸಿಕೊಳ್ಳಲು ಈ ಮಾರ್ಗ ಉತ್ತಮವಾಗಿರುತ್ತದೆ.
ದಂಪತಿಗಳು ಅಥವಾ ಪ್ರೇಮಿಗಳು ತಮ್ಮ ಸಂಬಂಧವನ್ನು ಬಲಪಡಿಸಲು ಪರಸ್ಪರ ಭರವಸೆಯನ್ನು ನೀಡುವುದಾಗಿದೆ. ಜೀವನದ ಯಾವುದೇ ಸಂದರ್ಭದಲ್ಲಿಯೂ, ಘಟ್ಟದಲ್ಲಿಯೂ ನಿನ್ನೊಂದಿಗೆ ನಾನಿರುವೆ ಎಂದು ಭರವಸೆಯನ್ನು ನೀಡಿ ಈ ದಿನ ಪರಸ್ವರ ಶುಭಾಶಯನ್ನು ತಿಳಿಸುವುದಾಗಿದೆ. ಬದಲಾಗಿ ಯಾವುದೇ ಕಷ್ಟದ ಸಮಯದಲ್ಲಿಯೂ ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಬೆಂಬಲವಾಗಿ ನಿಲ್ಲುವುದು ತುಂಬಾ ಅಗತ್ಯ. ನೀವು ನಿಮ್ಮ ಪ್ರೇಮಿಯೊಂದಿಗೆ ಖುಷಿಯ ಸಂದರ್ಭದಲ್ಲಿ ಜೊತೆಗಿಲ್ಲದ್ದರೂ ಪರವಾಗಿಲ್ಲ, ಆದರೆ ಅವರ ದುಃಖದ ಸಮಯದಲ್ಲಿ ಜೊತೆಯಾಗಿ ಬೆಂಬಲವಾಗಿ ನಿಲ್ಲಿ.
ಬದುಕಿನ ಭರವಸೆಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಆಚರಿಸುವ ಈ ಪ್ರಾಮಿಸ್ ಡೇ. ಇದು ನಿಮ್ಮ ಸಂಬಂಧ ಹಾಗೂ ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಾಯಕವಾಗಿದೆ. ಖುಷಿಯಲ್ಲೂ, ನೋವಲ್ಲೂ ಎಂತಹದೇ ಸಂದರ್ಭ ಬಂದರೂ ಕೈಬಿಡುವುದಿಲ್ಲ ಎನ್ನುವ ಭರವಸೆ ಈ ಪ್ರಾಮಿಸ್ ಡೇ ಮೂಡಿಸುತ್ತದೆ. ಇದೇ ಕಾರಣಕ್ಕೆ ಪ್ರೇಮಿಗಳ ವಾರದಲ್ಲಿ ಪ್ರಾಮಿಸ್ ಡೇ ಗೆ ಅಷ್ಟೊಂದು ಮಹತ್ವವಿದೆ.