Web Story: ನೀವು ಭಾರತದ ಶ್ರೀಮಂತರು ಯಾವ ಜಾತಿಯವರು ಎಂದು ಲೆಕ್ಕ ಹಾಕಿದರೆ, ನಿಮಗೆ ಸಿಗುವ ಹೆಚ್ಚಿನವರು ಗುಜರಾತಿಗಳೇ ಆಗಿರುತ್ತಾರೆ. ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಅಂಬಾನಿಯದ್ದು. ಇವರು ಕೂಡ ಗುಜರಾತಿಗಳು. ಅದಾನಿ, ಅಂಬಾನಿ, ಮೋದಿ ಇವರೆಲ್ಲರೂ ಗುಜರಾತಿಗಳೇ. ಹಾಗಾದ್ರೆ ಗುಜರಾತಿಗಳು ಉದ್ಯಮದಲ್ಲಿ ಪರಿಣಿತರಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಒಗ್ಗಟ್ಟು: ಗುಜರಾತಿಗಳಲ್ಲಿ ಒಗ್ಗಟ್ಟು ಹೆಚ್ಚಾಗಿರುತ್ತದೆ. ಓರ್ವ ಗುಜರಾತಿ ಉದ್ಯಮ ಆರಂಭಿಸಲು ಕಷ್ಟ ಪಡುತ್ತಿದ್ದಾನೆ ಎಂದು ಗೊತ್ತಿದ್ದಲ್ಲಿ, ಎಲ್ಲ ಗುಜರಾತಿಗಳು ಸೇರಿ, ಬಂಡವಾಳ ಸೇರಿಸಿ, ಕಡಿಮೆ ಬಡ್ಡಿಗೆ ಸಾಲ ನೀಡುತ್ತಾರೆ. ಉದ್ಯಮ ಆರಂಭಿಸಲು ಸಹಾಯ ಮಾಡುತ್ತಾರೆ. ಹಾಗಾಗಿಯೇ ಗುಜರಾತಿಗಳು ಯಾಾರ ಕೈ ಕೆಳಗೂ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಬದಲಾಗಿ ತಾವೇ ಕೆಲಸ ಪ್ರಾರಂಭಿಸಿ, ಬೇರೆಯವರಿಗೆ ಕೆಲಸ ಕೊಡುತ್ತಾರೆ.
ಬಾಲ್ಯದಿಂದಲೇ ಉದ್ಯಮದ ಬಗ್ಗೆ ಪರಿಣಿತಿ: ಗುಜರಾತಿಗಳು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ, ಉದ್ಯಮದ ಬಗ್ಗೆ ಪರಿಣಿತಿ ನೀಡುತ್ತಾರೆ. ಚಿಕ್ಕ ಮಕ್ಕಳಿರುವಾಗಲೇ, ದುಡ್ಡನ್ನು ಹೇಗೆ ಉಳಿತಾಯ ಮಾಡಬೇಕು. ದುಂದು ವೆಚ್ಚ ಮಾಡದೇ, ಹಣ ಹೇಗೆ ಉಳಿಸಬೇಕು. ವ್ಯಾಪಾರ ಮಾಡುವಾಗ, ಯಾವ ವಿಷಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ, ಉದ್ಯಮದಲ್ಲಿ ಪರಿಣಿತಿ ಹೊಂದುವಂತೆ ಮಾಡುತ್ತಾರೆ.
ಉದ್ಯಮಕ್ಕಾಗಿ ಸಮಯ ಮೀಸಲು: ಗುಜರಾತಿಗಳು ಉದ್ಯಮಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಉದ್ಯಮದಲ್ಲಿ ಪಳಗಿದ ಬಳಿಕ, ಕುಟುಂಬಕ್ಕೆ ಸಮಯ ನೀಡಲು ಪ್ರಾರಂಭಿಸುತ್ತಾರೆ. ಉದ್ಯಮಕ್ಕಾಗಿ ಅವರು ದೇಶ ವಿದೇಶಕ್ಕೆ ಪ್ರವಾಸ ಹೋಗುತ್ತಾರೆ. ಅಲ್ಲದೇ ಗುಜರಾತಿನಲ್ಲಿ ಬೋಟ್ ಮೂಲಕ, ವಸ್ತುಗಳನ್ನು ಸಾಾಗಿಸುವ ಅನುಕೂಲವಿರುವ ಕಾರಣ, ಗುಜರಾತಿಗಳು ಉದ್ಯಮ ನಡೆಸಲು ಇದು ಸಹಾಯಕವಾಗಿದೆ.