Friday, October 18, 2024

Latest Posts

ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ವಿಶೇಷತೆಗಳೇನು ಗೊತ್ತೇ..?

- Advertisement -

National News: ಇದೇ ವರ್ಷ ಜುಲೈ 12ರಂದು ಮುಖೇಶ್ ಮತ್ತು ಅನಿತಾ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚಂಟ್ ಅವರೊಂದಿಗೆ ಹಸೆಮಣೆ ಏರಲಿದ್ದಾರೆ.

ಆದರೆ ಅದಕ್ಕೂ ಮುನ್ನ ಮಾರ್ಚ್ 1ರಿಂದ 3ವರೆಗೂ ಅನಂತ್ ಮತ್ತು ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಮತ್ತು ಪರ್ಫಾಮೆನ್ಸ್ ಸಹ ಕೊಡಲಿದ್ದಾರೆ. ಬಚ್ಚನ್ ಮನೆತನ, ಶಾರೂಖ್ ಖಾನ್ ದಂಪತಿ, ದೀಪಿಕಾ-ರಣ್ವೀರ್ ಸೇರಿ, ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದ ಇನ್ನೊಂದು ವಿಶೇಷ ಅಂದ್ರೆ, ಬಂದ ಅತಿಥಿಗಳಿಗೆ 2,500 ಬಗೆಯ ಖಾದ್ಯಗಳನ್ನು ಮಾಡಿ ಉಣಬಡಿಸಲಾಗುತ್ತದೆ. ಅಂಬಾನಿ ಮನೆಯ ಪ್ರತೀ ಕಾರ್ಯಕ್ರಮದಲ್ಲೂ ವೆಜ್ ಪದಾರ್ಥಗಳನ್ನೇ ಮಾಡಿ, ಬಡಿಸಲಾಗುತ್ತದೆ. ಎಂದಿಗೂ ನಾನ್‌ವೆಜ್ ಪದಾರ್ಥ ಮಾಡುವುದಿಲ್ಲ. ಈ ಬಾರಿ ಸಹ, ಕಾರ್ಯಕ್ರಮಕ್ಕೆ ಬಂದ ಅತಿಥಿಗಳು 2,500 ಶಾಖಾಹಾರಿ ಭೋಜನಗಳನ್ನು ಸವಿಯಬಹುದು.

ಈ ಅಡುಗೆ ತಯಾರಿಸಲು 60 ಕೇಟರರ್ಸ್ ಸೇರಿ, 135 ಜನ ಇರುವ ಕೇಟರಿಂಗ್ ತಂಡ ಇಂದೋರ್‌ನಿಂದ ಬರಲಿದೆ. ಈ 2,500 ಪದಾರ್ಥಗಳಲ್ಲಿ ಭಾರತೀಯ ಖಾದ್ಯವಷ್ಟೇ ಅಲ್ಲದೇ, ಬೇರೆ ಬೇರೆ ದೇಶಗಳ ಖಾದ್ಯಗಳೂ ದೊರೆಯಲಿದೆ. ಬೆಳಗ್ಗಿನ ತಿಂಡಿ ಬಳಿಕ ಕೂಲ್‌ಡ್ರಿಂಕ್ಸ್, ಮಧ್ಯಾಹ್ನದ ಊಟ, ಸಂಜೆಯ ತಿಂಡಿ, ರಾತ್ರಿಯ ಊಟ ಮತ್ತು ಮಧ್ಯರಾತ್ರಿಯ ತಿಂಡಿಗೆ ತಕ್ಕಂತೆ, ಮೆನು ರೆಡಿ ಮಾಡಲಾಗಿದೆ.

ಜಾರ್ಖಂಡ್‌ನ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ಬಾಲಿವುಡ್ ಹಾಡುಗಾರ, ಗಝಲ್ ಮಾಂತ್ರಿಕ ಪಂಕಜ್‌ ಉದಾಸ್ ನಿಧನ

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

- Advertisement -

Latest Posts

Don't Miss