Sunday, September 8, 2024

Latest Posts

ಮನುಷ್ಯನ ಮುಖವನ್ನು ಹೋಲುವ ಗಣಪತಿ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

- Advertisement -

Spiritual: ಗಣಪತಿ ಅಂದ ತಕ್ಷಣ ನಮ್ಮ ನೆನಪಿಗೆ ಬರುವ ಮುಖ ಅಂದ್ರೆ, ದೊಡ್ಡ ಕಿವಿ, ಸೊಂಡಿಲು ಹೊಂದಿರುವ ಮುಖ, ಡೊಳ್ಳೊಟ್ಟೆ ಗಣಪ. ಆದರೆ ನೀವು ಸೊಂಡಿಲು ಇಲ್ಲದ ಗಣಪತಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಭಾರತದ ಒಂದು ದೇವಸ್ಥಾನದಲ್ಲಿ ಮನುಷ್ಯನ ಮುಖ ಹೋಲುವ ಗಣಪನ ದೇವಸ್ಥಾನವಿದೆ. ಹಾಗಾದ್ರೆ ಆ ದೇವಸ್ಥಾನ ಇರೋದಾದ್ರೂ ಎಲ್ಲಿ..? ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..

ತಮಿಳುನಾಡಿನ ತಿಲತರ್ಪಣ ಬಳಿಕ ಮುಕ್ತಿಶ್ವರರ್ ದೇವಾಲಯದಲ್ಲಿ ನರ ಮುಖ ಗಣೇಶನನ್ನು ಪೂಜಿಸಲಾಗುತ್ತದೆ. ಈತನನ್ನು ಆದಿ ವಿನಾಯಕ ಅಂತಲೂ ಕರೆಯಲಾಗುತ್ತದೆ.

ಇಲ್ಲಿ ನರಮುಖ ಗಣಪ ನೆಲೆನಿಂತ ಬಗ್ಗೆ ಹೇಳುವುದಾದರೆ,  ರಾಮ ತನ್ನ ತಂದೆ ದಶರಥ ರಾಜನ ಮುಕ್ತಿಗಾಗಿ ಪಿಂಡ ಪ್ರಧಾನ ಮಾಡುತ್ತಿರುತ್ತಾನೆ. ಆದರೆ ರಾಮನ ಮುಂದಿರುವ ಅನ್ನದ ಪಿಂಡ ಪ್ರತೀ ಸಾರಿಯೂ ಹುಳುವಾಗಿ ಮಾರ್ಪಡುತ್ತದೆ. ಹಾಗಾಗಿ ರಾಮ ಶಿವನನ್ನು ನೆನೆದು, ತಂದೆಯ ಮುಕ್ತಿಗಾಗಿ ಬೇಡಿಕೊಳ್ಳುತ್ತಾನೆ. ಆಗ ಶಿವ, ರಾಮನಿಗೆ ಮಂಥರವನಕ್ಕೆ ಹೋಗು ಎಂದು ಕಳಿಸುತ್ತಾನೆ.

ಮಂಥರವನಕ್ಕೆ ಬಂದ ರಾಮ, ದಶರಥನ ಮುಕ್ತಿಗಾಗಿ ಪಿಂಡ ಪ್ರಧಾನ ಮಾಡುತ್ತಾನೆ. ಈ ಬಾರಿ ಪಿಂಡಗಳೆಲ್ಲವೂ ಸರಿಯಾಗಿದ್ದು, ಕಾರ್ಯ ಪೂರ್ತಿಯಾಗುತ್ತದೆ. ಅಲ್ಲದೇ, ರಾಮನ ಮುಂದಿದ್ದ ಪಿಂಡಗಳು, ಶಿವಲಿಂಗವಾಗಿ ಮಾರರ್ಪಾಡಾಗುತ್ತದೆ. ಇದೇ ಮಂಥರವನ ಇಂದು ಮುಕ್ತಿಶ್ವರರ್ ದೇವಸ್ಥಾನವಾಗಿದೆ. ಇಲ್ಲಿಯೇ ಆ ನಾಲ್ಕು ಲಿಂಗಗಳನ್ನು  ಪ್ರತಿಷ್ಠಾಪಿಸಲಾಗಿದೆ.

ಅಲ್ಲದೇ, ರಾಾಮ ಇಲ್ಲಿ ತಿಲವನ್ನು ತರ್ಪಣ ಅಂದ್ರೆ ಪಿಂಡಪ್ರಧಾನ ಮಾಡಿದ ಕಾರಣಕ್ಕಾಗಿ, ಈ ಸ್ಥಳಕ್ಕೆ ತಿಲತರ್ಪಣಪುರಿ ಎಂದು ಹೆಸರು ಬಂತು. ಇಲ್ಲಿ ಬರುವ ಹಲವರು, ಪಿತ್ರ ದೋಷ ಪರಿಹಾರಕ್ಕಾಗಿ ಬೇಡಿಕೊಳ್ಳುತ್ತಾರೆ.

ಇಲ್ಲಿ ನೆಲೆ ನಿಂತಿರುವ ನರಮುಖ ವಿನಾಯಕ ಕೈಯಲ್ಲಿ ಕೊಡಲಿ ಹಿಡಿದಿದ್ದಾನೆ. ಸೊಂಟದ ಸುತ್ತಲೂ ನಾಗಾಭರಣ ಧರಿಸಿದ್ದಾನೆ. ಎಲ್ಲ ದೇವಸ್ಥಾನದಲ್ಲಿ ಶಿವನ ಮುಂದೆ ನಂದಿ ಇದ್ದರೆ, ಈ ದೇವಸ್ಥಾನದಲ್ಲಿ ಗಣಪನ ಮುಂದೆ ನಂದಿ ಇದೆ.

- Advertisement -

Latest Posts

Don't Miss