Uttara Pradesh News: ವರದಕ್ಷಿಣೆ ಅನ್ನೋದು ಭಾರತದಲ್ಲಿ ಎಂದೂ ಇರದ ಪದ್ಧತಿ. ಮಹಾಭಾರತ ಕಾಲದಲ್ಲಂತೂ ಹೆಣ್ಣಿನ ಕಡೆಯವರಿಗೆ ಮತ್ತು ಹೆಣ್ಣಿನ ಮನೆಯವರಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಆದರೆ ಭಾರತಕ್ಕೆ ಬಂದ ಬ್ರಿಟಿಷರು, ಡೌರಿ ಎನ್ನುವ ದರಿದ್ರ ಪದ್ಧತಿಯನ್ನು ನಮ್ಮ ಮೇಲೆ ಹೇರಿ, ಹೆಣ್ಣಿನ ಕಡೆಯವರಿಗೆ ಸಿಗುತ್ತಿದ್ದ ಗೌರವ ತಗ್ಗಿಸಿದರು. ಬಳಿಕ ವರದಕ್ಷಿಣೆ ಪದ್ಧತಿ ಜಾರಿಗೆ ಬಂತು. ಅಷ್ಟೇ ಬೇಗ, ಹಲವರ ಹೋರಾಟದ ಫಲವಾಗಿ, ಬ್ಯಾನ್ ಕೂಡ ಆಯಿತು. ಈಗ ಡೌರಿ ಪಡೆದರೆ, ಕೇಸ್ ಹಾಕಿ, ಜೈಲಿಗೆ ಹಾಕಲಾಗುತ್ತದೆ.
ಆದರೆ ಇಲ್ಲೊಂದು ಮದುವೆಯಲ್ಲಿ ಹೆಣ್ಣಿನ ಮನೆಯವರು ತಾವಾಗಿಯೇ ವರನ ಕಡೆಯವರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಉತ್ತರಪ್ರದೇಶದ ಮಿರತ್ ರೆಸಾರ್ಟ್ ಒಂದರಲ್ಲಿ ಮುಸ್ಲಿಂ ಸಂಪ್ರದಾಯದ ಮದುವೆ ನಡೆದಿದ್ದು, ಇಲ್ಲಿ ವಧುವಿನ ಕಡೆಯವರು ವರನಿಗೆ 2ವರೆ ಕೋಟಿ ರೂಪಾಯಿ ದುಡ್ಡು ಮತ್ತು 75 ಲಕ್ಷದ ಕಾರ್ ಗಿಫ್ಟ್ ಆಗಿ ನೀಡಿದ್ದಾರೆ.
ಅಲ್ಲದೇ ಮದುವೆ ಮಾಡಿಸಿದ ಮೌಲ್ವಿಗೆ 11 ಲಕ್ಷ ರೂಪಾಯಿ, ಸ್ಥಳೀಯ ಮಸೀದಿಗೆ 8 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಅಲ್ಲದೇ ಉತ್ತರ ಭಾರತೀಯರಲ್ಲಿ ವಧುವಿನ ಅಕ್ಕ ತಂಗಿಯರೆಲ್ಲ ಸೇರಿ, ವರನ ಚಪ್ಪಲಿ ಬಚ್ಚಿಡುವ ಪದ್ಧತಿ ಇದೆ. ಚಪ್ಪಲಿ ಬೇಕಾದಲ್ಲಿ ವರ ವಧುವಿನ ಅಕ್ಕ ತಂಗಿಯರಿಗೆ ದುಡ್ಡು ಕೊಟ್ಟು ಚಪ್ಪಲಿ ವಾಪಸ್ ಪಡೆಯಬೇಕು. ಹೀಗೆ ಚಪ್ಪಲಿ ಕದ್ದ ವಧುವಿನ ಕಡೆಯವರಿಗೆ 11 ಲಕ್ಷ ರೂಪಾಯಿ ನೀಡಿದ್ದಾರೆ.
मेरठ के एक रिसोर्ट में 12 करोड़ की शादी चर्चा में है…दूल्हे को दहेज में 2.50 करोड रुपए मिले , 11 लाख रुपए जूता चोरी के दिए…निकाह पढ़ाने वाले को 11 लाख और 8 लाख रुपए मस्जिद के लिए दान दिया गया…सूटकेस भर भर कर पैसों का आदान प्रदान… pic.twitter.com/l2NYXfqhfK
— Ravish Ranjan Shukla (@ravishranjanshu) December 2, 2024