Kolar News: ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಸಾಧ್ಯತೆ ಕುರಿತು ಕೋಲಾರದಲ್ಲಿ ಬಿಜೆಪಿ ಹಾಲಿ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಇತ್ತೀಚಿನ ದಿನಗಳಲ್ಲಿ ನನಗೆ ಟಿಕೆಟ್ ಆಗಿದೆ ಅಂತ ಕೆಲವರು ಹೇಳ್ತಿದ್ದಾರೆ ಬಟ್ಟೆ ಹೋಲಿಸಿದ್ದೇನೆ. ಫೋಟೋ ರೆಡಿ ಇದೆ ಅಂತ ಹೇಳ್ತಿದ್ದಾರೆ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದ್ರು ನಾನು ಕೆಲಸ ಮಾಡ್ತೀನಿ NDA ಮೈತ್ರಿ ಕೂಟ ಗೆಲ್ಲಬೇಕು. ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂಬುದೆ ನನ್ನ ಉದ್ದೇಶ ವಾಗಿದೆ ಎಂದಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಜನರ ಅಭಿಪ್ರಾಯ ಕ್ಕಾಗಿ 6 ತಿಂಗಳಿಂದ ಬಿಜೆಪಿ ಹೈಕಮಾಂಡ್ ನಿಂದ ಮೂರ್ನಾಕು ಸರ್ವೇ ಮಾಡಲಾಗಿದೆ. ಯಾರಿಗೆ ಟಿಕೇಟ್ ನೀಡಿದ್ರೆ ಗೆಲ್ಲುತ್ತಾರೆ ಅಂತ ನಮ್ಮ ಹೈಕಮಾಂಡ್ ಗೂ ತಿಳಿದಿದೆ. 2019 ರ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಮತಗಳಿಂದ ಗೆದ್ದಿದ್ದೇನೆ ಅಂತ ಜೆಡಿಎಸ್ ನ ಕೆಲವರು ಹೇಳಿದ್ದಾರೆ. ಆದರೆ ದೇಶ ಭಕ್ತರು ನನಗೆ ಮತ ನೀಡಿ ಮೋದಿನ ಪ್ರಧಾನಿ ಮಾಡಿದ್ದಾರೆ. ಈ ತರಹ ಹೇಳಿಕೆ ನೀಡಿರುವ ಜೆಡಿಎಸ್ ನ ನಟರಾಜ್ ಇದನ್ನು ತಿಳಿದುಕೊಳ್ಳಬೇಕು. ಇನ್ಮುಂದೆ ನೋಡಿ ಮಾತನಾಡಬೇಕು , ಕುಮಾರಣ್ಣ ಹಾಗೂ ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ.
ನಮ್ಮ ಕಾರ್ಯಕರ್ತರು ಮೈತ್ರಿ ಬಗ್ಗೆ ಏನೂ ಮಾತನಾಡಬಾರದು ಎಂದು ಅವರಿಗೆ ಕಟ್ಟು ನಿಟ್ಟಾಗಿ ತಿಳಿಸಿದ್ದೇನೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತುಂಬಾ ಬಲವಾಗಿದೆ. ಕೊನೆ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ರು ಸಹ ನನಗೆ 7 ಲಕ್ಷ ಮತ ಬಂದಿದೆ. ನಾವೆಲ್ಲ ಈಗ NDA ಅಭ್ಯರ್ಥಿ ಪರವಾಗಿ ಕೆಲಸ ಮಾಡ್ತೀವಿ. ಹೈಕಮಾಂಡ್ ಗೆ ನಮ್ಮ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಏನೇ ಆದರೂ ನಾವೆಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮೋದಿ ಪರವಾಗಿ ಮತ ಹಾಕುತ್ತಾರೆ ಮೈತ್ರಿ ಅಭ್ಯರ್ಥಿ ಕನಿಷ್ಠ 3 ಲಕ್ಷ ಅಂತರದಲ್ಲಿ ಗೆಲ್ಲಲಿದ್ದಾರೆ.
ಹೈಕಮಾಂಡ್ ನನ್ನ ಸ್ಪರ್ಧೆ ಬೇಡ ಅಂತ ಹೇಳಿದರೆ ನಾನು ಸ್ಪರ್ಧೆ ಮಾಡೋದಿಲ್ಲ. ನಾನು ನಿರಂತರವಾಗಿ ಜನರ ಬಳಿ ಇದ್ದೇನೆ .ಇದೇ ರೀತಿ ಜೆಡಿಎಸ್ ನವರು ಸಹ ನಮ್ಮ ಜೊತೆ ಚುನಾವಣೆ ಪ್ರಚಾರ ಆರಂಭ ಮಾಡಬೇಕು. NDA ಮೈತ್ರಿ ಕೂಟ 400 ರಿಂದ 415 ಸೀಟು ಗೆಲ್ಲಲಿದೆ. ಟಿಕೇಟ್ ಸಿಗದವರಿಗೆ ಮುಂದೆ ಸ್ಥಾನಮಾನ ಸಿಗಲಿದೆ . ಈ ಬಾರಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗಿರೋದ್ರಿಂದ ಕಾಂಗ್ರೆಸ್ ಮುಕ್ತ ಭಾರತ ಆಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..