Saturday, October 25, 2025

Latest Posts

ವಾಶ್‌ರೂಮ್‌ನಲ್ಲಿ ಮೊಬೈಲ್ ಬಳಸುವುದರಿಂದ ಯಾವ ಆರೋಗ್ಯ ಸಮಸ್ಯೆ ಬರತ್ತೆ ತಿಳಿದಿದೆಯಾ..?

- Advertisement -

Health Tips: ಇಂದಿನ ಕಾಲದಲ್ಲಿ ಮೊಬೈಲ್ ಅನ್ನೋದು ಮನುಷ್ಯನ ಜೀವನದಲ್ಲಿ ಅದೆಂಥ ಮೋಡಿ ಮಾಡಿದೆ ಅಂದ್ರೆ, ಜನಕ್ಕೆ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿ ಮಲಗುವ ಮುನ್ನ, ಆಹಾರ ಸೇವಿಸುವಾಗ, ನಡೆದಾಡುವಾಗ, ಅಲ್ಲದೇ ವಾಶ್‌ರೂಮ್‌ನಲ್ಲೂ ಮೊಬೈಲ್ ಬೇಕು. ಎಲ್ಲ ಕಡೆ ಓಕೆ, ಆದ್ರೆ ವಾಶ್‌ರೂಮ್‌ನಲ್ಲೂ ಮೊಬೈಲ್ ಏಕೆ..? ಅನ್ನೋದು ಪ್ರಶ್ನೆ.

ಕಸ ಆಚೆ ಹಾಕುವಾಗಲಾದ್ರೂ ಆ ಮೊಬೈಲ್‌ನನ್ನು ನೀವು ವಾಶ್‌ರೂಮ್‌ಗೆ ತೆಗೆದುಕ“ಂಡು ಹೋಗಬಾರದು. ಹಾಗಾದ್ರೆ ವಾಶ್‌ರೂಮ್‌ಗೆ ಮೊಬೈಲ್ ತೆಗೆದುಕ“ಂಡು ಹೋಗುವುದರಿಂದ ಆಗುವ ಆರೋಗ್ಯ ಸಮಸ್ಯೆಗಳೇನು ಅಂತಾ ತಿಳಿಯೋಣ ಬನ್ನಿ..

ವಾಶ್‌ರೂಮ್‌ಗೆ ಹೋದಾಗ, ನೀವು ಕಮಾಡ್‌ ಮೇಲೆ ಕುಳಿತಾಗ, ಜೀರ್ಣಾಂಗದ ಮೇಲೆ ಭಾರ ಬೀಳುತ್ತದೆ. ನಾವು ನಾರ್ಮಲ್ ಆಗಿ ಕುಳಿತುಕ“ಳ್ಳಲು ಮತ್ತು ಕಮಾಡ್‌ ಮೇಲೆ ಮಲ ವಿಸರ್ಜನೆಗೆ ಕುಳಿತುಕ“ಳ್ಳಲು ವ್ಯತ್ಯಾಸವಿದೆ.

ಹಾಗಾಗಿ ನಾವು ಮಲವಿಸರ್ಜನೆಗಾಗಿ ಕಮಾಡ್‌ ಮೇಲೆ ಕುಳಿತಾಗ, ನಮ್ಮ ಜೀರ್ಣಾಂಗದ ಮೇಲೆ ಭಾರ ಬೀಳುತ್ತಾರೆ. ಹಾಗಾಗಿ ನಾವು ಮಲ ವಿಸರ್ಜನೆ ಮಾಡಿದ ತಕ್ಷಣ, ಎದ್ದು ಬರಬೇಕು. ಅದನ್ನು ಬಿಟ್ಟು ಅಲ್ಲೇ ತುಂಬ ಸಮಯ ಕಳೆದರೆ, ಅದರಿಂದ ನಮಗೆ ಪೈಲ್ಸ್ ಬರುತ್ತದೆ. ಹಾಗಾಗಿಯೇ ವಾಶ್ರೂಮ್‌ಗೆ ಹೋಗುವಾಗ ಫೋನ್ ಬಳಸಬೇಡಿ ಅನ್ನೋದು.

ಇನ್ನು ನಾವು ಮಲವಿಸರ್ಜನೆ ಮಾಡಿ ಬಂದ ಬಳಿಕ, ಅಲ್ಲಿ ಕ್ಲೀನ್ ಮಾಡುತ್ತೇವೆ. ಕೈ ಕ್ಲೀನ್ ಮಾಡುತ್ತೇವೆ. ಕಾಲನ್ನು ಕೂಡ ವಾಶ್ ಮಾಡುತ್ತೇವೆ. ಆದರೆ ನೀವು ನಿಮ್ಮ ಫೋನನ್ನು ವಾಶ್ ಮಾಡುತ್ತೀರಾ..? ಖಂಡಿತ ಸಾಧ್ಯವಿಲ್ಲ. ಆಗ ವಾಶ್‌ರೂಮ್‌ನಲ್ಲಿ ಮಲದಲ್ಲಿದ್ದ ಬ್ಯಾಕ್ಟೀರಿಯಾ ಅದರ ಮೇಲೆ ತಾಕಿರುತ್ತದೆ.  ಅದೇ ಫೋನ್ ಹಿಡಿದು, ಆಹಾರ ಸೇವಿಸಲು ಬರುತ್ತೀರಾ. ಅದೇ ಫೋನ್‌ ಹಿಡಿದು ಎಲ್ಲೆಡೆ ತಿರುಗುತ್ತೀರಾ. ಹೀಗಾದಾಗ ನಿಮ್ಮ ಆರೋಗ್ಯ ಹಾಳಾಗದೇ ಇದ್ದೀತಾ..? ಹಲವು ರೀತಿಯ ರೋಗ, ರುಜಿನ ಬರದೇ ಇದ್ದೀತಾ..? ಬಂದೇ ಬರುತ್ತದೆ. ಹಾಗಾಗಿ ಫೋನ್‌ನ್ನು ಎಂದಿಗೂ ವಾಶ್‌ರೂಮ್ಗೆ ತಗೆದುಕ“ಂಡು ಹೋಗಬೇಡಿ.

- Advertisement -

Latest Posts

Don't Miss