Spiritual: ವಿದುರನ ಪ್ರಕಾರ, ಈ ಮೂರು ಕಾರಣಗಳಿಂದ ಜನರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಆದರೆ ಎಲ್ಲ ನಿದ್ರಾಹೀನತೆಯಿಂದ ಬಳಲುವವರಿಗೆ ಇದೇ ಕಾರಣ ಅಂತಲ್ಲ. ಆದರೆ ಈ ಮೂರು ಯೋಚನೆ ಯಾರ ತಲೆಯಲ್ಲಿ ಇರುತ್ತದೆಯೋ, ಅವರು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಅಂತಾರೆ ವಿದುರರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಕಾರಣ: ನಿಮಗೆ ಯಾವುದಾದರೂ ವಿಷಯದಲ್ಲಿ ಭಯ ಅಥವಾ ಯಾವುದಾದರೂ ವಿಷಯದಲ್ಲಿ ಟೆನ್ಶನ್ ಇದ್ದರೆ ನಿದ್ದೆ ಸರಿಯಾಗಿ ಬರುವುದಿಲ್ಲ. ಮನೆಯಲ್ಲಿ ಜಗಳವಾಗಿ ನೆಮ್ಮದಿ ಹಾಳಾಗಿರುತ್ತದೆ. ಅಥವಾ ಸಾಲ ಮಾಡಿರುತ್ತೀರಿ. ಅಥವಾ ನಿಮಗೆ ಯಾರದ್ದಾದರೂ ಭಯವಿರುತ್ತದೆ. ಇಂಥ ಕಾರಣಗಳಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ.
ಎರಡನೇಯ ಕಾರಣ: ದುರಹಂಕಾರಿ ಮತ್ತು ಸ್ವಾರ್ಥಿಗಳಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಮನಸಲ್ಲಿ ಇನ್ನೊಬ್ಬರ ಬಗ್ಗೆ ಅಸೂಯೆ ಇರಿಸಿಕೊಳ್ಳುವುದರಿಂದ, ಅತೀ ಹೆಚ್ಚು ದುರಹಂಕಾರ ಪಡುವುದರಿಂದ, ಸ್ವಾರ್ಥಿಗಳಾಗುವುದರಿಂದ ಮನುಷ್ಯ ಸಂಬಂಧಿಕರನ್ನು ದೂರ ಮಾಡಿಕೊಳ್ಳುತ್ತಾನೆ. ಕೆಲವರು ಸಂಬಂಧ, ಹಣ, ಸ್ನೇಹ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಎಲ್ಲ ಇದ್ದೂ ಏನೂ ಇಲ್ಲದವರಂತೆ ಬದುಕುತ್ತಾರೆ. ಇಂಥವರು ನೆಮ್ಮದಿ ಕಳೆದುಕೊಂಡು ನಿದ್ರೆಗೆಡುತ್ತಾರೆ.
ಮೂರನೇಯ ಕಾರಣ: ಯಾರ ವಸ್ತುವನ್ನಾದರೂ ಕಳ್ಳತನ ಮಾಡಬೇಕು. ಯಾರ ದುಡ್ಡನ್ನು ಹೇಗಾದರೂ ಕದಿಯಬೇಕು ಎಂಬ ಮನಸ್ಥಿತಿ ಉಳ್ಳವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಏಕೆಂದರೆ, ಅವರಿಗೆ ಆ ವಸ್ತುವನ್ನು ಹೇಗೆ ಕದಿಯಬೇಕು, ಏನು ಮಾಡಬೇಕು ಎನ್ನುವುದೇ ತಲೆಯಲ್ಲಿರುತ್ತದೆ. ಹಾಗಾಗಿ ಕಳ್ಳರಿಗೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರುವುದಿಲ್ಲ.
ಇನ್ನು ಈ ಮೂರು ಯೋಚನೆ ಬಿಟ್ಟು, ಕೆಲವರಿಗೆ ದೇಹದಲ್ಲಿ ಕೆಲವು ಆರೋಗ್ಯಕರ ಅಂಶಗಳು ಇಲ್ಲದಿದ್ದಾಗ, ನಿದ್ರೆ ಬರುವುದಿಲ್ಲ. ಸರಿಯಾಗಿ ಊಟ ಮಾಡದೇ ಇದ್ದಾಗ, ಇಂದಿನ ಕಾಲದವರು ಹೆಚ್ಚು ಮೊಬೈಲ್, ಟಿವಿ ನೋಡಿದಾಗಲೂ ನಿದ್ರೆ ಬರುವುದಿಲ್ಲ.

